ಭಾರತದಿಂದ ಹತ್ತಿ, ನೂಲು ಆಮದಿಗೆ ಪಾಕ್ ಹಸಿರು ನಿಶಾನೆ

ಇಸ್ಲಾಮಾಬಾದ್ (ಪಾಕಿಸ್ತಾನ), ಮಾ. 31: ಭಾರತದಿಂದ ಹತ್ತಿ ಮತ್ತು ನೂಲು ಆಮದಿಗೆ ಪಾಕಿಸ್ತಾನದ ಆರ್ಥಿಕ ಸಮನ್ವಯ ಮಂಡಳಿ ಬುಧವಾರ ಅನುಮೋದನೆ ನೀಡಿದೆ ಎಂದು ಮೂಲಗಳು ತಿಳಿಸಿರುವುದಾಗಿ ‘ರಾಯ್ಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇದನ್ನು ಎರಡು ಬದ್ಧ ವೈರಿಗಳ ನಡುವಿನ ಸ್ಥಗಿತಗೊಂಡಿರುವ ವ್ಯಾಪಾರಕ್ಕೆ ಪುನಶ್ಚೇತನ ನೀಡುವ ಕ್ರಮದ ಮೊದಲ ಹಂತ ಎಂಬುದಾಗಿ ಭಾವಿಸಲಾಗಿದೆ.
ಭಾರತದಿಂದ ಸಕ್ಕರೆ ಆಮದು ಮಾಡಿಕೊಳ್ಳುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ ಎನ್ನಲಾಗಿದೆ.
Next Story





