ಪತನಗೊಂಡಿದ್ದ ಇಂಡೋನೇಶ್ಯ ವಿಮಾನದ ಬ್ಲ್ಯಾಕ್‌ಬಾಕ್ಸ್ ಎರಡೂವರೆ ತಿಂಗಳ ಬಳಿಕ ಪತ್ತೆ

ಜಕಾರ್ತ (ಇಂಡೋನೇಶ್ಯ), ಮಾ. 31: ಎರಡೂವರೆ ತಿಂಗಳಿಗೂ ಅಧಿಕ ಸಮಯದ ಹಿಂದೆ ಸಮುದ್ರಕ್ಕೆ ಅಪ್ಪಳಿಸಿರುವ ಇಂಡೋನೇಶ್ಯದ ಪ್ರಯಾಣಿಕ ವಿಮಾನವೊಂದರ ಕಾಕ್‌ಪಿಟ್ ವಾಯ್ಸ್ ರೆಕಾರ್ಡರನ್ನು ‘ಸುಸ್ಥಿತಿಯಲ್ಲಿ’ ಪತ್ತೆಹಚ್ಚಲಾಗಿದೆ ಎಂದು ಅಧಿಕಾರಿಗಳು ಬುಧವಾರ ತಿಳಿಸಿದ್ದಾರೆ.
ಜನವರಿ 9ರಂದು ಶ್ರೀವಿಜಯ ಏರ್ ಗೆ ಸೇರಿದ ಬೋಯಿಂಗ್ 737-500 ವಿಮಾನವು ಜಕಾರ್ತ ಹೊರವಲಯದ ಸಮುದ್ರದಲ್ಲಿ ಪತನಗೊಂಡಿತ್ತು. ವಿಮಾನದಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಸೇರಿ ಎಲ್ಲ 62 ಮಂದಿ ಮೃತಪಟ್ಟಿದ್ದರು.
Next Story





