ಜರ್ಮನಿ: ಆ್ಯಸ್ಟ್ರಝೆನೆಕ ಲಸಿಕೆ 60 ವರ್ಷಕ್ಕಿಂತ ಹಿರಿಯರಿಗೆ ಮಾತ್ರ

ಬರ್ಲಿನ್ (ಜರ್ಮನಿ), ಮಾ. 31: ಜರ್ಮನಿಯಲ್ಲಿ ಆ್ಯಸ್ಟ್ರಝೆನೆಕ ಕಂಪೆನಿಯ ಕೊರೋನ ವೈರಸ್ ಲಸಿಕೆಯನ್ನು 60 ವರ್ಷಕ್ಕಿಂತ ಹೆಚ್ಚಿನ ಹಿರಿಯರಿಗೆ ಮಾತ್ರ ನೀಡಲಾಗುವುದು ಎಂದು ದೇಶದ ಸರಕಾರ ಮಂಗಳವಾರ ತಿಳಿಸಿದೆ.
ಲಸಿಕೆ ತೆಗೆದುಕೊಂಡ ಬಳಿಕ, ರಕ್ತ ಹೆಪ್ಪುಗಟ್ಟುವ ಹಲವು ಪ್ರಕರಣಗಳು ದಾಖಲಾದ ಬಳಿಕ, ಯುವಕರು ಈ ಲಸಿಕೆಯನ್ನು ತೆಗೆದುಕೊಳ್ಳುವುದಕ್ಕೆ ನಿರ್ಬಂಧಗಳನ್ನು ವಿಧಿಸಲಾಗಿದೆ.
‘‘ಆದರೂ, ಲಸಿಕೆ ನೀಡಿರುವ ವೈದ್ಯರೊಂದಿಗೆ ಸಮಾಲೋಚನೆ ನಡೆಸಿದ ಬಳಿಕ, 60 ವರ್ಷಕ್ಕಿಂತ ಕೆಳಗಿನವರೂ ಲಸಿಕೆಯನ್ನು ತೆಗೆದುಕೊಳ್ಳಬಹುದಾಗಿದೆ’’ ಎಂದು ಜರ್ಮನಿಯ 16 ರಾಜ್ಯಗಳ ಆರೋಗ್ಯ ಸಚಿವರು ಮತ್ತು ಕೇಂದ್ರ ಆರೋಗ್ಯ ಸಚಿವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಆ್ಯಸ್ಟ್ರಝೆನೆಕ ಲಸಿಕೆಯು ಬಳಕೆಗೆ ಸುರಕ್ಷಿತವಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಐರೋಪ್ಯ ಒಕ್ಕೂಟದ ಆರೋಗ್ಯ ನಿಗಾ ಸಂಸ್ಥೆಗಳು ಅಭಿಪ್ರಾಯಪಟ್ಟಿವೆ. ಆದರೆ, ರಕ್ತಹೆಪ್ಪುಗಟ್ಟುವ ಹೆದರಿಕೆಯಿಂದ ಹಲವು ದೇಶಗಳು ಅದರ ಬಳಕೆಯನ್ನು ನಿರ್ಬಂಧಿಸಿವೆ.
Next Story





