ಮಮತಾ ಬ್ಯಾನರ್ಜಿಗೆ ವಯಸ್ಸಾಗಿದೆ, ಹೊಲಸು ಭಾಷೆಯ ಬಳಕೆಯನ್ನು ಬಿಡಬೇಕು: ಸುವೇಂದು ಅಧಿಕಾರಿ

Photo Credit: Twitter
ಕೋಲ್ಕತಾ: ಮಮತಾ ಬ್ಯಾನರ್ಜಿಗೆ ವಯಸ್ಸಾಗಿದೆ. ಹೊಲಸು ಭಾಷೆಯ ಬಳಕೆಯನ್ನು ಬಿಡಬೇಕು ಎಂದು ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬ್ಯಾನರ್ಜಿ ಅವರ ಮಾಜಿ ವಿಶ್ವಾಸಾರ್ಹ ನಾಯಕ ಹಾಗೂ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಹೇಳಿದ್ದಾರೆ.
ಮಮತಾ 66ರ ವಯಸ್ಸಿನ ಆಂಟಿ ಎಂದು ಉಲ್ಲೇಖಿಸಿದ ಅಧಿಕಾರಿ, ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಯಲ್ಲಿ ಮಮತಾ ಅವರು ಸೋಲುವ ಬಗ್ಗೆ ಎಚ್ಚರಿಕೆ ನೀಡಿದರು.
ತನ್ನ ವಿರುದ್ಧ ಕೆಲಸ ಮಾಡಿದವರನ್ನು ರಕ್ಷಿಸಲು ಮೇ 2ರಂದು ಫಲಿತಾಂಶ ಪ್ರಕಟವಾದ ಬಳಿಕವೂ ರಾಜ್ಯದಲ್ಲಿ ಕೇಂದ್ರ ಪಡೆಗಳು ಇರುತ್ತವೆ ಎಂದು ಮಮತಾ ಅವರ ಹೇಳಿಕೆಗೆ ಅಧಿಕಾರಿ ಪ್ರತಿಕ್ರಿಯಿಸಿದರು.
ಅವರು ಮುಖ್ಯಮಂತ್ರಿಯಾಗಿರುವುದರಿಂದ ಸ್ವಲ್ಪ ಸಂಯವನ್ನು ತೋರಿಸಬೇಕು. ಅವರು ಪ್ರಧಾನಮಂತ್ರಿಯ ಬಗ್ಗೆ ಹೊಲಸು ಭಾಷೆ ಬಳಸುತ್ತಾರೆ. ಅವರು 66 ವರ್ಷದ ಆಂಟಿ ಎಂದು ನಂದಿಗ್ರಾಮದಲ್ಲಿ ಸಿಎಂ ಮಮತಾ ಬ್ಯಾನರ್ಜಿ ವಿರುದ್ದ ಸ್ಪರ್ಧಿಸುುತ್ತಿರುವ ಅಧಿಕಾರಿ ಹೇಳಿದರು.
ಮಮತಾ ಕಾನೂನು ಬಾಹಿರವಾಗಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ್ದಾರೆ. ಹ್ಯೂಗ್ಲಿ ಜಿಲ್ಲೆಯಲ್ಲಿಯೂ ನಂದಿಗ್ರಾಮದ ಬಗ್ಗೆ ಮಾತನಾಡಿದ್ದಾರೆ. ಹೆಲಿಪ್ಯಾಡ್ ನಲ್ಲಿ ನಂದಿಗ್ರಾಮದ ಕುರಿತು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ್ದಾರೆ. ಮತದಾರರ ಮೇಲೆ ಪ್ರಭಾವ ಬೀರುವ ಅವರ ಪ್ರಯತ್ನಗಳು ವ್ಯರ್ಥವಾಗುತ್ತವೆ ಎಂದು ಅಧಿಕಾರಿ ಹೇಳಿದ್ದಾರೆ.







