ಬಹು ಅಂಗಾಂಗ ಕಸಿ ಯೋಜನೆಗಾಗಿ ಚೆನ್ನೈಯ ಎಂಜಿಎಂ ಹೆಲ್ತ್ ಕೇರ್ ಜತೆ ಕೈಜೋಡಿಸಿದ ಮೈತ್ರಾ ಆಸ್ಪತ್ರೆ

ಬೆಂಗಳೂರು: ಹೃದಯ, ಶ್ವಾಸಕೋಶ ಹಾಗೂ ಯಕೃತ್ ಕಸಿ ನಡೆಸಲು (ಹಾರ್ಟ್ ಎಂಡ್ ಲಂಗ್ ಟ್ರಾನ್ಸ್ ಪ್ಲಾಂಟ್ ಪ್ರೋಗ್ರಾಂ) ಕೊಝಿಕ್ಕೋಡ್‍ನಲ್ಲಿರುವ ಮೈತ್ರಾ ಆಸ್ಪತ್ರೆ ಚೆನ್ನೈ ಮೂಲದ ಎಂಜಿಎಂ ಹೆಲ್ತ್ ಕೇರ್ ಸಂಸ್ಥೆಯೊಂದಿಗೆ ಕೈಜೋಡಿಸಿದೆ. ಈ ಕುರಿತ ಒಪ್ಪಂದವೊಂದಕ್ಕೆ ಮೈತ್ರಾ ಆಸ್ಪತ್ರೆಯ ಅಧ್ಯಕ್ಷರಾದ ಫೈಝಲ್ ಇ ಕೊಟ್ಟಿಕೊಲ್ಲನ್, ಎಂಜಿಎಂ ಹೆಲ್ತ್ ಕೇರ್ ಸಂಸ್ಥೆಯ ಹಾರ್ಟ್ ಎಂಡ್ ಲಂಗ್ ಟ್ರಾನ್ಸ್ ಪ್ಲಾಂಟ್ಸ್ ಮೆಕಾನಿಕಲ್ ಸರ್ಕ್ಯುಲೇಟರಿ ಸಪೋರ್ಟ್ ನಿರ್ದೇಶಕರಾದ ಡಾ ಕೆ.ಆರ್ ಬಾಲಕೃಷ್ಣನ್, ಅದೇ ಸಂಸ್ಥೆಯ ಇನ್‍ಸ್ಟಿಟ್ಯೂಟ್ ಆಫ್ ಲಿವರ್ ಡಿಸೀಸಸ್, ಟ್ರಾನ್ಸ್ ಪ್ಲಾಂಟ್ ಎಂಡ್ ಎಚ್‍ಪಿಬಿ ಸರ್ಜರಿ ನಿರ್ದೇಶಕ ಡಾ. ತ್ಯಾಗರಾಜನ್ ಶ್ರೀನಿವಾಸನ್ ಅವರು ಸಹಿ ಹಾಕಿದ್ದಾರೆ. ಮೈತ್ರಾ ಆಸ್ಪತ್ರೆಯ ನಿರ್ದೇಶಕರಾದ ಡಾ. ಅಲಿ ಫೈಝಲ್ ಹಾಗೂ ಎಂಜಿಎಂ ಹೆಲ್ತ್ ಕೇರ್ ಸಿಇಒ ಹರೀಶ್ ಮಣಿಯನ್ ಕೂಡ ಈ ಸಂದರ್ಭ ಉಪಸ್ಥಿತರಿದ್ದರು.
ಹೃದ್ರೋಗಿಗಳಿಗೆ ಅತ್ಯುತ್ತಮ ಚಿಕಿತ್ಸೆ ನಿಡುವ ಆಸ್ಪತ್ರೆ ಎಂದು ಗುರುತಿಸಲ್ಪಟ್ಟಿರುವ ಮೈತ್ರಾ ಆಸ್ಪತ್ರೆ ತನ್ನ ಈ ಹಾರ್ಟ್ ಎಂಡ್ ಲಂಗ್ ಟ್ರಾನ್ಸ್ ಪ್ಲಾಂಟ್ ಪ್ರೋಗ್ರಾಂ ಅನ್ವಯ ಅಗತ್ಯವುಳ್ಳ ರೋಗಿಗಳಿಗೆ ಹೃದಯ ಮತ್ತು ಶ್ವಾಸಕೋಶ ಕಸಿ, ಹೃದಯ ವೈಫಲ್ಯ ಸಮಸ್ಯೆ ನೀಗಿಸಲು ಮೆಕಾನಿಕಲ್ ಸರ್ಕ್ಯುಲೇಟರ್ ಸಪೋರ್ಟ್ ಡಿವೈಸಸ್, ಸಿಂಗಲ್ ಲಂಗ್ ರಿಟ್ರೀವಲ್ ಪ್ರಕ್ರಿಯೆಗಳನ್ನು ನಡೆಸಲಿದೆ. ಈ ಅಂಗ ಕಸಿ ಯೋಜನೆಯನ್ನು ಏಷ್ಯಾದಲ್ಲಿಯೇ ಅತ್ಯಧಿಕ ಸಂಖ್ಯೆಯ ಹೃದಯ ಮತ್ತು ಶ್ವಾಸಕೋಶ ಕಸಿ ನಡೆಸಿರುವ ತಜ್ಞ ವೈದ್ಯರ ತಂಡ ಮುನ್ನಡೆಸಲಿದೆ.
ಡಾ ಕೆ.ಆರ್ ಬಾಲಕೃಷ್ಣನ್ ಅವರು 375ಕ್ಕೂ ಅಧಿಕ ಹೃದಯ ಮತ್ತು ಶ್ವಾಸಕೋಶದ ಕಸಿ ಶಸ್ತ್ರಕ್ರಿಯೆ ನಡೆಸಿದ್ದಾರೆ ಹಾಗೂ ಭಾರತದಲ್ಲಿಯೇ ಪ್ರಥಮ ಎನ್ನಲಾದ ಅಪರೂಪದ ಹೃದಯ ಶಸ್ತ್ರಕ್ರಿಯೆಗಳನ್ನೂ ನಡೆಸಿದ್ದಾರೆ. ಡಾ. ತ್ಯಾಗರಾಜನ್ ಶ್ರೀನಿವಾಸನ್ ಅವರಿಗೆ 1,700ಕ್ಕೂ ಅಧಿಕ ಶ್ವಾಸಕೋಶ ಕಸಿ ನಡೆಸಿದ ಅನುಭವವಿದೆ.
ಲಿವರ್ ಟ್ರಾನ್ಸ್ ಪ್ಲಾಂಟ್ ಪ್ರೋಗ್ರಾಂ ಸಂಸ್ಥೆಯ ಸೆಂಟರ್ ಆಫ್ ಎಕ್ಸಲೆನ್ಸ್ ಫಾರ್ ಗ್ಯಾಸ್ಟ್ರೋ ಸಾಯನ್ಸಸ್ ಅಧೀನದಲ್ಲಿ ಕಾರ್ಯಾಚರಿಸಲಿದ್ದು ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ತಜ್ಞ ವೈದ್ಯರ ಮಾರ್ಗದರ್ಶನದಲ್ಲಿ ಇಲ್ಲಿ ನೀಡಲಾಗುವುದು.
"ಈ ಬಹುಅಂಗಾಂಗ ಕಸಿ ಯೋಜನೆಗಾಗಿ ಜಗದ್ವಿಖ್ಯಾತ ತಜ್ಞರಾದ ಡಾ. ಕೆ.ಆರ್ ಬಾಲಕೃಷ್ಣನ್ ಹಾಗೂ ಡಾ ತ್ಯಾಗರಾಜನ್ ಅವರ ಜತೆ ಕಾರ್ಯನಿರ್ವಹಿಸಲು ಹಾಗೂ ಎಂಜಿಎಂ ಹೆಲ್ತ್ ಕೇರ್ ಜತೆ ಸಹಯೋಗ ಹೊಂದಲು ನಮಗೆ ಖುಷಿಯಿದೆ. ಇದು ಈ ಪ್ರಾಂತ್ಯದ ಆರೋಗ್ಯ ಕ್ಷೇತ್ರದ ಚಿತ್ರಣವನ್ನು ಪರಿವರ್ತಿಸಲಿದೆ ಎಂಬ ನಂಬಿಕೆಯಿದೆ" ಎಂದು ಮೈತ್ರಾ ಆಸ್ಪತ್ರೆಯ ಅಧ್ಯಕ್ಷರಾದ ಡಾ. ಫೈಝಲ್ ಜಿ ಕೊಟ್ಟಿಕೊಲ್ಲನ್ ಹೇಳಿದ್ದಾರೆ.
ಮೈತ್ರಾ ಆಸ್ಪತ್ರೆ: ಕೋಝಿಕ್ಕೋಡ್‍ನಲ್ಲಿರುವ 220 ಹಾಸಿಗೆಗಳ ಮೈತ್ರಾ ಆಸ್ಪತ್ರೆ ಅತ್ಯುತ್ತಮ ಗುಣಮಟ್ಟದ ಆರೋಗ್ಯ ಸೇವಾ ಸೌಲಭ್ಯಗಳನ್ನು ʼಎವಿಡೆನ್ಸ್ ಬೇಸ್ಡ್ ಗೈಡ್ ಲೈನ್ಸ್' ಆಧಾರದಲ್ಲಿ ಒದಗಿಸುತ್ತಿದೆ ಹಾಗೂ ರೋಗಿಗಳು ಉತ್ತಮ ಜೀವನ ನಡೆಸುವಂತಾಗಲು ಶ್ರಮಿಸುತ್ತದೆ. ಎಲ್ಲಾ ಆರೋಗ್ಯ ಸೇವಾ ವಿಭಾಗಗಳಲ್ಲೀ ಕ್ಲಿನಿಕಲ್ ಕೇರ್ ಸೌಲಭ್ಯಗಳನ್ನು ಈ ಹೊಸತಾಗಿ ಸ್ಥಾಪಿಸಲಾಗಿರುವ ಆಸ್ಪತ್ರೆ ಒದಗಿಸುತ್ತಿದೆ. ಆಸ್ಪತ್ರೆಯಲ್ಲಿ ಹಾರ್ಟ್ ಎಂಡ್ ವಾಸ್ಕ್ಯುಲರ್ ಕೇರ್, ಬೋನ್ ಎಂಡ್ ಜಾಯಿಂಟ್ ಕೇರ್, ನ್ಯೂರೋಸಾಯನ್ಸಸ್, ಗ್ಯಾಸ್ಟ್ರೋ ಸಾಯನ್ಸಸ್ ಮತ್ತು ರೀನಲ್ ಹೆಲ್ತ್ ಎಂಡ್ ಇಂಟರ್‍ವೆನ್ಶನ್ ವಿಭಾಗಗಳಲ್ಲಿ ಸೆಂಟರ್ಸ್ ಆಫ್ ಎಕ್ಸಲೆನ್ಸ್ ಕಾರ್ಯಾಚರಿಸುತ್ತಿವೆ.
ಎಂಜಿಎಂ ಹೆಲ್ತ್ ಕೇರ್: ಚೆನ್ನೈ ನಗರದ ನೆಲ್ಸನ್ ಮಣಿಕ್ಕಂ ರಸ್ತೆಯಲ್ಲಿರುವ ಈ ಅತ್ಯಾಧುನಿಕ ಆಸ್ಪತ್ರೆ 400 ಹಾಸಿಗೆಗಳು, 50 ಹೊರರೋಗಿ ಕನ್ಸಲ್ಟೇಶನ್ ಕೊಠಡಿಗಳು, 100 ತೀವ್ರ ನಿಗಾ ಹಾಸಿಗೆಗಳು, 250ಕ್ಕೂ ಅಧಿಕ ವೈದ್ಯರು, 30ಕ್ಕೂ ಅಧಿಕ ಕ್ಲಿನಿಕಲ್ ವಿಭಾಗಗಳು, 12 ಆಧುನಿಕ ಆಪರೇಷನ್ ಥಿಯೇಟರುಗಳು ಹಾಗೂ ದಿನದ 24 ಗಂಟೆಯೂ ಕಾರ್ಯಾಚರಿಸುವ ಎಮರ್ಜನ್ಸಿ ಕೇರ್ ವ್ಯವಸ್ಥೆಯನ್ನು ಹೊಂದಿದೆ,. ಈ ಆಸ್ಪತ್ರೆ ಏಷ್ಯಾದ ಗರಿಷ್ಠ ರೇಟಿಂಗ್ ಪಡೆದ ಯುಎಸ್‍ಜಿಬಿಸಿ ಎಲ್‍ಇಇಡಿ ಪ್ಲಾಟಿನಂ ಪ್ರಮಾಣೀಕೃತ ಗ್ರೀನ್ ಹಾಸ್ಪಿಟಲ್ ಆಗಿದೆ.







