ಕುಂದಾಪುರ ಶಿಕ್ಷಣ ಅಭಿವೃದ್ಧಿ ಚಿಂತನ ಸಮಾರಂಭ

ಕುಂದಾಪುರ, ಎ.1: ನಮ್ಮ ನಾಡ ಒಕ್ಕೂಟ ಕುಂದಾಪುರ ಘಟಕದ ವತಿಯಿಂದ ಶಿಕ್ಷಣ ಅಭಿವೃದ್ಧಿ ಚಿಂತನ ಕಾರ್ಯಕ್ರಮ ಹಾಗೂ ಸನ್ಮಾನ ಕಾರ್ಯಕ್ರಮ ಕುಂದಾಪುರದಲ್ಲಿ ಜರುಗಿತು.
ಕಾರ್ಯಕ್ರಮದಲ್ಲಿ ವ್ಯಕ್ತಿತ್ವ ವಿಕಾಸನದ ಅಗತ್ಯತೆಯ ಬಗ್ಗೆ ಹಾಗೂ ಶೈಕ್ಷಣಿಕ ರಂಗದಲ್ಲಿ 10ನೇ ತರಗತಿಯ ಪಾತ್ರ ಹಾಗೂ ಪೋಷಕರ ಜವಾಬ್ದಾರಿಯ ಬಗ್ಗೆ ಜೇಸಿ ವಲಯ ತರಬೇತುದಾರ ಕೆ ಕೆ ಶಿವರಾಮ್ ಮಾತನಾಡಿದರು.
ನಮ್ಮ ನಾಡ ಒಕ್ಕೂಟದ ಸಂಘಟನಾ ಕಾರ್ಯದರ್ಶಿ ಹುಸೇನ್ ಹೈಕಾಡಿ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷರಾಗಿ ಆಯ್ಕೆಯಾದ ಕೋಟ ಇಬ್ರಾಹಿಂ ಸಾಹೇಬ್ ಮತ್ತು ಉಡುಪಿ ಜಿಲ್ಲೆ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಜಮೀಯತುಲ್ ಫಲಹಾದ ಅಧ್ಯಕ್ಷರಾಗಿ ಆಯ್ಕೆಗೊಂಡ ಶಬೀ ಅಹ್ಮದ್ ಖಾಝಿ ಅವರನ್ನು ನಮ್ಮ ನಾಡ ಒಕ್ಕೂಟ ಕುಂದಾಪುರದ ಘಟಕದ ಪರವಾಗಿ ಸನ್ಮಾನಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಮ್ಮ ನಾಡ ಒಕ್ಕೂಟದ ಟ್ರಸ್ಟಿ ಜಮೀರ್ ಅಹ್ಮದ್ ರಷಾದಿ, ಉಡುಪಿ ಘಟಕದ ಅಧ್ಯಕ್ಷ ನಝಿರ್ ಅಹಮದ್ ನೇಜಾರ್, ಬ್ರಹ್ಮಾವರ ಘಟಕದ ಅಧ್ಯಕ್ಷ ಶಾಕಿರ್ ಹಾವಂಜೆ , ಕುಂದಾಪುರ ಘಟಕದ ಅಧ್ಯಕ್ಷ ಎಸ್. ದಸ್ತಗೀರ್ ಕಂಡ್ಲೂರ್, ಉಪಾಧ್ಯಕ್ಷ ಮುಹಮ್ಮದ್ ಮುಸ್ತಾಕ್ ಅಹ್ಮದ್ ಕೋಡಿ, ಜೊತೆ ಕಾರ್ಯದರ್ಶಿ ಮುನ್ನ ಕೋಡಿ, ಬೈಂದೂರು ಘಟಕದ ಅಧ್ಯಕ್ಷ ಅಬ್ದುಲ್ ಸಮಿ, ಉಪಾಧ್ಯಕ್ಷರಾದ ಸಯ್ಯದ್ ಅಜ್ಮಲ್ ಬೈಂದೂರ್, ಹೆಬ್ರಿ ಘಟಕದ ಉಪಾಧ್ಯಕ್ಷ ಮುಸ್ತಾಕ್ ಅಹಮದ್ ಬೆಳ್ವೆ, ಜಮೀಯತುಲ್ ಫಲಾಹ್ ಕುಂದಾಪುರ ಘಟಕದ ಅಧ್ಯಕ್ಷ ಅಬುಮುಹಮ್ಮದ್, ಮುಸ್ಲಿಂ ಒಕ್ಕೂಟ ಕುಂದಾಪುರ ಘಟಕದ ಅಧ್ಯಕ್ಷ ಮುಹಮ್ಮದ್ ರಫೀಕ್ ಮುಂತಾದವರು ಉಪಸ್ಥಿತ ರಿದ್ದರು.
ಹೆಬ್ರಿ ಘಟಕದ ಕಾರ್ಯದರ್ಶಿ ಅಬ್ದುಲ್ ಶುಕೂರ್ ಬೆಳ್ವೆ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.







