ಮರಕಡದಲ್ಲಿ ಬಸ್ ತಡೆದು ಪ್ರತಿಭಟನೆ
ಮಂಗಳೂರು, ಎ.1: ನಗರ ಹೊರವಲಯ ಮರಕಡ ಜಂಕ್ಷನ್‌ನಲ್ಲಿ ಬುಧವಾರ ರಸ್ತೆ ದಾಟುತ್ತಿದ್ದ ವಿದ್ಯಾರ್ಥಿನಿ ಪವಿತ್ರಾಳ ಸಾವಿಗೆ ಕಾರಣವಾದ ಖಾಸಗಿ ಬಸ್ ರಹದಾರಿ ಇಲ್ಲದೆ ಈ ರೂಟ್‌ನಲ್ಲಿ ಸಂಚರಿಸುತ್ತಿದೆ ಎಂದು ಆರೋಪಿಸಿದ ಸಾರ್ವಜನಿಕರು ಗುರುವಾರ ಬಸ್ ತಡೆದು ಪ್ರತಿಭಟನೆ ನಡೆಸಿದರಲ್ಲದೆ, ರಹದಾರಿ ಇಲ್ಲದೆ ಬಸ್ ಸಂಚರಿಸುತ್ತಿರುವ ಬಗ್ಗೆ ಪೊಲೀಸರು ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಸಾರ್ವಜನಿಕರು ನವದುರ್ಗಾ ಕಂಪೆನಿಯ ಮೂರು ಬಸ್‌ಗಳನ್ನು ತಡೆದು ನಿಲ್ಲಿಸಿ, ಬಸ್ ಮಾಲಕರು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದರು. ಸ್ಥಳಕ್ಕೆ ಬಂದ ಪೊಲೀಸರು ಪ್ರತಿಭಟನಾಕಾರರು ಹಾಗೂ ಬಸ್‌ಗಳನ್ನು ಕಾವೂರು ಪೊಲೀಸ್ ಠಾಣೆಗೆ ಕೊಂಡೊಯ್ದರು. ಸಂಚಾರ ಪೊಲೀಸರ ಸಮ್ಮುಖ ಬಸ್‌ನವರು ರಹದಾರಿ ಹಾಜರುಪಡಿಸಿದರು. ಬಳಿಕ ಪೊಲೀಸರು ಸಾರ್ವಜನಿಕರನ್ನು ಸಮಾಧಾನಪಡಿಸಿ ವಾಪಸ್ ಕಳುಹಿಸಿದರು.
Next Story





