ಕ್ಯಾಲಿಫೋರ್ನಿಯಾದಲ್ಲಿ ಗುಂಡು ಹಾರಾಟ; 4 ಸಾವು

ಲಾಸ್ ಏಂಜಲಿಸ್ (ಅಮೆರಿಕ), ಎ. 1: ಅವೆುರಿಕದ ಕ್ಯಾಲಿಫೋರ್ನಿಯ ರಾಜ್ಯದ ಆರೇಂಜ್ ನಗರದಲ್ಲಿ ಬುಧವಾರ ನಡೆದ ಗುಂಡು ಹಾರಾಟದಲ್ಲಿ ನಾಲ್ವರು ಮೃತಪಟ್ಟಿದ್ದಾರೆ ಹಾಗೂ ಇಬ್ಬರು ಗಾಯಗೊಂಡಿದ್ದಾರೆ. ಬಳಿಕ, ಪೊಲೀಸರು ಓರ್ವ ಶಂಕಿತನನ್ನು ಬಂಧಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಲಾಸ್ ಏಂಜಲಿಸ್ ನಗರದಿಂದ ಸುಮಾರು 46 ಕಿ.ಮೀ. ದೂರದಲ್ಲಿರುವ ಆರೇಂಜ್ ನಗರದಲ್ಲಿನ ವಾಣಿಜ್ಯ ಸಂಕೀರ್ಣವೊಂದರಲ್ಲಿ ಗುಂಡು ಹಾರಾಟ ನಡೆದಿದೆ ಎಂದು ಕೆಎನ್‌ಬಿಸಿ-ಟಿವಿ ವರದಿ ಮಾಡಿದೆ. ಮೃತರ ಪೈಕಿ ಒಂದು ಮಗುವೂ ಸೇರಿದೆ.
ಗಾಯಗೊಂಡವರಲ್ಲಿ ಗುಂಡು ಹಾರಿಸಿದವನೂ ಇದ್ದಾನೆ ಎಂದು ಮಾಧ್ಯಮಗಳು ವರದಿ ಮಾಡಿವೆ.
Next Story





