ಅರುಣಾಚಲಪ್ರದೇಶದ 3 ಜಿಲ್ಲೆಗಳಲ್ಲಿ ಎಎಫ್‌ಎಸ್‌ಪಿಎ ವಿಸ್ತರಣೆ
ಹೊಸದಿಲ್ಲಿ, ಎ. 1: ಅರುಣಾಚಲ ಪ್ರದೇಶದ ಮೂರು ಜಿಲ್ಲೆಗಳಲ್ಲದೆ, ಅಸ್ಸಾಂ ಗಡಿಯ ಇತರ ಮೂರು ಜಿಲ್ಲೆಗಳ ನಾಲ್ಕು ಪೊಲೀಸ್ ಠಾಣಾ ಪ್ರದೇಶಗಳಲ್ಲಿ ಸಶಸ್ತ್ರ ಪಡೆ (ವಿಶೇಷಾಧಿಕಾರ) ಕಾಯ್ದೆಯನ್ನು ಕೇಂದ್ರ ಸರಕಾರ ಇನ್ನೂ 6 ತಿಂಗಳು ವಿಸ್ತರಿಸಿದೆ. ಅಲ್ಲದೆ, ಅಲ್ಲಿ ನಿಷೇಧಿತ ಉಗ್ರ ಸಂಘಟನೆಗಳ ಚಟುವಟಿಕೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ‘ಪೀಡಿತ’ ಜಿಲ್ಲೆಗಳು ಎಂದು ಘೋಷಿಸಿದೆ. ಗೃಹ ಸಚಿವಾಲಯದ ಅಧಿಸೂಚನೆ ಪ್ರಕಾರ, ಅರುಣಾಚಲಪ್ರದೇಶದ ತಿರಪ್, ಚಂಗ್ಲಾಂಗ್, ಲೋಗ್ಡಿಂಗ್ ಜಿಲ್ಲೆಗಳು ಹಾಗೂ ಅಸ್ಸಾಂ ಗಡಿಯ ನಾಲ್ಕು ಪೊಲೀಸ್ ಠಾಣೆಗಳನ್ನು ಸಶಸ್ತ್ರ ಪಡೆ ವಿಶೇಷಾಧಿಕಾರ ಕಾಯ್ದೆ ಅಡಿ ‘ಪೀಡಿತ’ ಎಂದು ಘೋಷಿಸಲಾಗಿದೆ.
Next Story





