ಬ್ರಿಟನ್ ಪ್ರಧಾನಿಯ ಕರಿಯ ಸಲಹೆಗಾರ ರಾಜೀನಾಮೆ
ಲಂಡನ್, ಎ. 1: ಬ್ರಿಟನ್ ಪ್ರಧಾನಿ ಬೊರಿಸ್ ಜಾನ್ಸನ್‌ರ ಅತ್ಯಂತ ಹಿರಿಯ ಕರಿಯ ಸಲಹೆಗಾರ ಸಾಮುಯೆಲ್ ಕಸುಮು ರಾಜೀನಾಮೆ ನೀಡಿದ್ದಾರೆ ಎಂದು ಡೌನಿಂಗ್ ಸ್ಟ್ರೀಟ್‌ನಲ್ಲಿರುವ ಪ್ರಧಾನಿಯ ಕಚೇರಿ ಗುರುವಾರ ತಿಳಿಸಿದೆ.
ಬ್ರಿಟನ್‌ನ ಸಾಂಸ್ಥಿಕ ವ್ಯವಸ್ಥೆಯಲ್ಲಿ ಜನಾಂಗೀಯ ತಾರತಮ್ಯವಿಲ್ಲ ಎನ್ನುವ ಬ್ರಿಟನ್ ಸರಕಾರದ ವರದಿಯೊಂದು ಭಾರೀ ಆಕ್ರೋಶಕ್ಕೆ ಕಾರಣವಾದ ಒಂದು ದಿನದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
ಪ್ರಧಾನಿ ಕಚೇರಿಯಲ್ಲಿ ‘ಅಸಹನೀಯ ಒತ್ತಡ’ವಿದೆ ಎಂದು ಹೇಳಿ ಫೆಬ್ರವರಿಯಲ್ಲೇ ರಾಜೀನಾಮೆ ನೀಡಲು ಸಾಮುಯೆಲ್ ಮುಂದಾಗಿದ್ದರು. ಆದರೆ, ಅಂದು ರಾಜೀನಾಮೆ ನೀಡದಂತೆ ಅವರ ಮನವೊಲಿಸಲಾಗಿತ್ತು.
ಜಾನ್ಸನ್‌ರ ಕನ್ಸರ್ವೇಟಿವ್ ಪಕ್ಷವು ವಿಭಜನೆಯ ರಾಜಕಾರಣವನ್ನು ಮಾಡುತ್ತಿದೆ ಎಂದು ಅವರು ಆರೋಪಿಸಿದ್ದರು.
Next Story





