ಪಾಲ್ದನೆ ಚರ್ಚ್‌ನಲ್ಲಿ ‘ಮಾಂಡಿ ಥರ್ಸ್‌ಡೇ’ ಬಲಿಪೂಜೆ ಆಚರಣೆ

ಮಂಗಳೂರು, ಎ.1: ನಗರದ ಪಾಲ್ದನೆಯ ಸಂತ ತೆರೆಸಾ ಚರ್ಚ್‌ನಲ್ಲಿ ಇಂದು ಪವಿತ್ರ ಗುರುವಾರದ ಬಲಿಪೂಜೆಯನ್ನು ಆಚರಿಸಲಾಯಿತು. ಬಲಿಪೂಜೆಯಲ್ಲಿ ಭಾಗವಹಿಸಿದ ಮಂಗಳೂರು ಧರ್ಮಪ್ರಾಂತದ ಜ್ಯುಡಿಷಿಯಲ್ ವಿಕಾರ್ ವಂ.ಫಾ. ವಾಲ್ಟರ್ ಡಿಮೆಲ್ಲೊ ಏಸುಕ್ರಿಸ್ತರು ತನ್ನ 12 ಜನ ಶಿಷ್ಯರ ಕಾಲು ತೊಳೆದ ಸಂಕೇತವಾಗಿ ಚರ್ಚಿನಿಂದ ಆರಿಸಲ್ಪಟ್ಟ 12 ಜನರ ಕಾಲುಗಳನ್ನು ತೊಳೆಯುವ ಕಾರ್ಯವನ್ನು ನೆರವೇರಿಸಿದರು.
ಬಲಿಪೂಜೆಯ ಪ್ರಧಾನ ನೇತೃತ್ವ ವಹಿಸಿದ ಚರ್ಚಿನ ಧರ್ಮಗುರು ವಂ.ಆಲ್ಬನ್ ಡಿಸೋಜ ಈ ದಿನದ ಮಹತ್ವವನ್ನು ವಿವರಿಸಿದರು. ಬಲಿಪೂಜೆಯಲ್ಲಿ ಚರ್ಚಿನ ಉಪಾಧ್ಯಕ್ಷ ವಿಲಿಯಂ ಲೋಬೊ, ಕಾರ್ಯದರ್ಶಿ ಆಸ್ಟಿನ್ ಮೊಂತೇರೊ ಮತ್ತಿತರರು ಪಾಲ್ಗೊಂಡಿದ್ದರು.
Next Story





