ಕ್ರಿಕೆಟಿಗ ನಟರಾಜನ್ ಮನೆಗೆ ತಲುಪಿದ ಮಹಿಂದ್ರಾ ಎಸ್‌ಯುವಿ ಕಾರು
ಆಸ್ಟ್ರೇಲಿಯಾ ಸರಣಿಯ ವೇಳೆ ಉಡುಗೊರೆ ಘೋಷಿಸಿದ್ದ ಸಿಇಒ ಆನಂದ್ ಮಹಿಂದ್ರಾ

ಹೊಸದಿಲ್ಲಿ: ಇತ್ತೀಚೆಗೆ ಆಸ್ಟ್ರೇಲಿಯಾ ವಿರುದ್ಧ ನಡೆದಿದ್ದ ಟೆಸ್ಟ್ ಪಂದ್ಯಾಟದಲ್ಲಿ ಉತ್ತಮ ಪ್ರದರ್ಶನ ತೋರಿ ಸರಣಿಯನ್ನು ಕೈವಶಪಡಿಸಿಕೊಂಡಿದ್ದ ಭಾರತ ತಂಡದ ಯುವ ಆಟಗಾರರಿಗೆ ಎಸ್‌ಯುವಿ ಕಾರನ್ನು ಉಡುಗೊರೆ ನೀಡುತ್ತೇನೆಂದು ಆನಂದ್ ಮಹಿಂದ್ರಾ ಘೋಷಿಸಿದ್ದರು. ಅದರಂತೆಯೇ ಇದೀಗ ಭಾರತೀಯ ಕ್ರಿಕೆಟ್ ತಂಡದ ಯುವ ಆಟಗಾರ ಟಿ. ನಟರಾಜನ್ ಮನೆಗೆ ಮಹಿಂದ್ರಾ ಥಾರ್ ಎಸ್‌ಯುವಿ ಕಾರನ್ನು ತಲುಪಿಸಲಾಗಿದೆ.
ಭಾರತೀಯ ಕ್ರಿಕೆಟ್ ತಂಡ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಶುಭ್ ಮನ್ ಗಿಲ್, ವಾಷಿಂಗ್ಟನ್ ಸುಂದರ್, ಶಾರ್ದುಲ್ ಠಾಕೂರ್, ಮುಹಮ್ಮದ್ ಸಿರಾಜ್, ನವದೀಪ್ ಸೈನಿ ಹಾಗೂ ನಟರಾಜನ್ ರಿಗೆ ಮಹಿಂದ್ರಾ ಎಸ್ ಯುವಿ ಕಾರನ್ನು ನೀಡುವುದಾಗಿ ಆನಂದ್ ಮಹಿಂದ್ರಾ ಘೋಷಿಸಿದ್ದರು.
ತಮ್ಮ ಹೊಸ ಕಾರಿನೊಂದಿಗೆ ಫೋಟೊ ಕ್ಲಿಕ್ಕಿಸಿದ ನಟರಾಜನ್, "ನನ್ನ ಕ್ರಿಕೆಟ್ ಪ್ರಯಾಣವನ್ನು ಗುರುತಿಸಿ ನನಗೆ ಈ ಎಸ್ಯುವಿ ಕಾರನ್ನು ಉಡುಗೊರೆಯಾಗಿ ನೀಡಿದ ಆನಂದ್ ಮಹಿಂದ್ರಾರವರಿಗೆ ಧನ್ಯವಾದಗಳು. ಅವರಿಗೆ ಕ್ರಿಕೆಟ್ ನೊಂದಿಗಿರುವ ಆಸಕ್ತಿಯನ್ನು ಪರಿಗಣಿಸಿ ಗಬ್ಬಾ ಟೆಸ್ಟ್ ಸಂದರ್ಭದಲ್ಲಿ ನಾನು ಧರಿಸಿದ್ದ ನನ್ನ ಸಹಿಯಿರುವ ಟಿ ಶರ್ಟ್ ಅನ್ನು ನೀಡುತ್ತಿದ್ದೇನೆ" ಎಂದು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ.
ಭಾರತೀಯ ಕ್ರಿಕೆಟ್ ತಂಡದ ಇನ್ನೋರ್ವ ವೇಗದ ಬೌಲರ್ ಶಾರ್ದೂಲ್ ಠಾಕೂರ್ ಕೂಡಾ ಕಾರನ್ನು ಪಡೆದಿರುವ ಬಗ್ಗೆ ಸಾಮಾಜಿಕ ತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
Playing cricket for India is the biggest privilege of my life. My #Rise has been on an unusual path. Along the way, the love and affection, I have received has overwhelmed me. The support and encouragement from wonderful people, helps me find ways to #ExploreTheImpossible ..1/2 pic.twitter.com/FvuPKljjtu
— Natarajan (@Natarajan_91) April 1, 2021
As I drive the beautiful @Mahindra_Thar home today, I feel immense gratitude towards Shri @anandmahindra for recognising my journey & for his appreciation. I trust sir, that given your love for cricket, you will find this signed shirt of mine from the #Gabba Test, meaningful 2/2
— Natarajan (@Natarajan_91) April 1, 2021
New Mahindra Thar has arrived!! @MahindraRise has built an absolute beast & I’m so happy to drive this SUV. A gesture that youth of our nation will look upto. Thank you once again Shri @anandmahindra ji, @pakwakankar ji for recognising our contribution on the tour of Australia. pic.twitter.com/eb69iLrjYb
— Shardul Thakur (@imShard) April 1, 2021