ಬಿಎಸ್ವೈ ರಾಜೀನಾಮೆ ನೀಡಲಿ, ರಾಷ್ಟ್ರಪತಿ ಆಡಳಿತ ಜಾರಿ ಆಗಲಿ: ಸಿದ್ದರಾಮಯ್ಯ

ಫೈಲ್ ಚಿತ್ರ
ದಾವಣಗೆರೆ, ಎ.2: ಬಿಜೆಪಿ ಸರಕಾರ ಜವಾಬ್ದಾರಿ ಇಲ್ಲದ ಬೇಜವಾಬ್ದಾರಿ ಸರ್ಕಾರವಾಗಿದ್ದು, ರಾಜ್ಯಪಾಲರು ರಾಷ್ಟ್ರಪತಿ ಆಡಳಿತಕ್ಕೆ ಶಿಫಾರಸ್ಸು ಮಾಡಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಆಡಳಿತ ಸಂಪೂರ್ಣ ವೈಫಲ್ಯ ಕಂಡಿದೆ. ಈ ಕೂಡಲೇ ಸಿಎಂ ಬಿಎಸ್ ವೈ ರಾಜೀನಾಮೆ ನೀಡಲಿ. ನಂತರ ರಾಷ್ಟ್ರಪತಿ ಆಡಳಿತ ಜಾರಿ ಆಗಬೇಕು ಎಂದರು.
ನಾವು ವಿರೋಧ ವ್ಯಕ್ತಪಡಿಸಿದರೆ ವಿರೋಧ ಪಕ್ಷದವರು ಅಂತಾರೆ. ಅವರ ಪಕ್ಷದವರೇ ವಿರೋಧ ಮಾಡಿದರೆ ಸತ್ಯ ಎಂದು ಆಯ್ತಲ್ಲ. ಬಿಜೆಪಿಯವರೇ ಸಿಎಂಗೆ ವಿರೋಧ ಮಾಡಿದ್ದು ಸತ್ಯವಾಗಿದೆ. ಒಬ್ಬರ ಮೇಲೆ ಒಬ್ಬರಿಗೆ ವಿಶ್ವಾಸ ಇಲ್ಲವಾಗಿದೆ. ಈ ಸರ್ಕಾರ ಮೊದಲು ತೊಲಗಬೇಕು ಎಂದ ಅವರು, ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ತನಿಖೆ ನಡೆಯುತ್ತಿದೆ. ಮುಂದೆ ಸತ್ಯ ಹೊರ ಬರಲಿದೆ ಎಂದರು.
Next Story





