ನಾನು ರೆಬೆಲ್ ಅಲ್ಲ, ಲಾಯಲ್: ಸಚಿವ ಕೆ.ಎಸ್.ಈಶ್ವರಪ್ಪ

ಮೈಸೂರು, ಎ.2: ನಾನು ರೆಬೆಲ್ ಅಲ್ಲ, ಲಾಯಲ್. ಹಾಗಾಗಿಯೇ ನಾನು ಪಕ್ಷವನ್ನು ಉಳಿಸುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದ ಜಿ.ಪಂ. ಆವರಣದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ನಾನು ರಾಜ್ಯಪಾಲರನ್ನು ಭೇಟಿ ಮಾಡಿ ಬಂದಿರುವದರ ಬಗ್ಗೆ ಮಾಧ್ಯಮದಗಳು ತಮ್ಮದೇ ಆದ ಶೈಲಿಯಲ್ಲಿ ಬರೆದಿದ್ದಾರೆ. ಕೆಲವು ಪತ್ರಿಕೆಗಳು ಸರ್ಕಾರದ ವಿರುದ್ಧ ಈಶ್ವರಪ್ಪ ರೆಬೆಲ್ ಎಂದು ಬರೆದಿದ್ದಾರೆ. ನಾನು ರೆಬೆಲ್ ಅಲ್ಲ, ಲಾಯಲ್. ಹಾಗಾಗಿ ನಾನು ಪಕ್ಷ ಉಳಿಸುವ ಕೆಲಸವನ್ನು ಮಾಡಿದ್ದೇನೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿ ಯಡಿಯೂರಪ್ಪ ಅಧಿಕಾರದಿಂದ ಇಳಿಯುತ್ತಾರೆ, ಈಶ್ವರಪ್ಪ ಸಹ ಅಧಿಕಾರ ಕಳೆದುಕೊಳ್ಳುತ್ತಾರೆ ಎಂದಿದ್ದಾರೆ. ಇದು ಅವರ ಹಗಲು ಗನಸು, ನಮ್ಮ ಸರ್ಕಾರ ಸುಭದ್ರವಾಗೇ ಇರುತ್ತದೆ. ಇಂತಹ ಯೋಚನೆಗಳನ್ನು ವಿರೋಧ ಪಕ್ಷಗಳು ಬಿಡಬೇಕು, ನಾಮ್ಮಲ್ಲಿ ಏನೆ ಸಮಸ್ಯೆ ಇದ್ದರೂ ನಾವೆಲ್ಲರೂ ಒಂದೇ ಎಂದು ಹೇಳಿದರು.
Next Story





