ಎ.4ರವರೆಗೆ ಫೋರಂ ಮಾಲ್‌ನಲ್ಲಿ ವಿಶೇಷ ಕೊಡುಗೆ
ಮಂಗಳೂರು, ಎ.2: ನಗರದ ಪ್ರತಿಷ್ಠಿತ ಫೋರಂ ಫಿಝಾ ಮಾಲ್ ಗ್ರಾಹಕರ ತೃಪ್ತಿಗಾಗಿ ವಿಶೇಷ ಕೊಡುಗೆಯನ್ನು ಪ್ರಕಟಿಸಿದೆ. ಫ್ಯಾಶನ್, ಗೃಹೋಪಯೋಗಿ ವಸ್ತುಗಳು, ಪಾದರಕ್ಷೆ, ಇಲೆಕ್ಟ್ರಾನಿಕ್ ಉಪಕರಣಗಳ ಸಹಿತ 300ಕ್ಕೂ ಅಧಿಕ ಬ್ರಾಂಡ್‌ಗಳು ಗ್ರಾಹಕರನ್ನು ಆಕರ್ಷಿಸುತ್ತಿದ್ದು, ಬಹುಮಾನದ ಅವಕಾಶವನ್ನೂ ನೀಡಲಾಗುತ್ತಿದೆ.
ಎ.4ರವರೆಗೆ 2,500ರೂ. ಮೌಲ್ಯದ ವಸ್ತು ಖರೀದಿಗೆ 500 ರೂ. ಗಿಫ್ಟ್ ಕೂಪನ್, 5,000 ರೂ. ಮೌಲ್ಯದ ವಸ್ತು ಖರೀದಿಗೆ 5 ಗ್ರಾಂ ಬೆಳ್ಳಿ ನಾಣ್ಯ, 12,000 ರೂ. ಮೌಲ್ಯದ ವಸ್ತು ಖರೀದಿಗೆ ಜೆಬಿಎಲ್ ಬ್ಲೂಟೂಥ್ ಹಾಗೂ ದಿನದ ಅತೀ ಹೆಚ್ಚಿನ ಖರೀದಿದಾರರೊಬ್ಬರಿಗೆ ಒಂದು ಗ್ರಾಂ ಚಿನ್ನದ ನಾಣ್ಯ ದೊರಕಲಿದೆ.ಹೆಚ್ಚಿನ ಖರೀದಿಗೆ ಹೆಚ್ಚು ಮೌಲ್ಯದ ಖಚಿತ ಬಹುಮಾನದ ಅವಕಾಶವಿದೆ. ಗ್ರಾಹಕರು ಇದರ ಸದುಪಯೋಗಪಡಿಸಿ ಕೊಳ್ಳಬೇಕು ಎಂದು ಪ್ರಕಟನೆ ತಿಳಿಸಿದೆ.
Next Story





