ಶಿವಮೊಗ್ಗ ನೂತನ ಎಸ್ಪಿಯಾಗಿ ಲಕ್ಷ್ಮೀ ಪ್ರಸಾದ್ ಅಧಿಕಾರ ಸ್ವೀಕಾರ

ಶಿವಮೊಗ್ಗ, ಎ.2: ಶಿವಮೊಗ್ಗದ ನೂತನ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅಧಿಕಾರ ಸ್ವೀಕರಿಸಿದರು. ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೆ.ಎಂ.ಶಾಂತರಾಜು ಅವರು ಲಕ್ಷ್ಮೀ ಪ್ರಸಾದ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.
ನೂತನ ಎಸ್ಪಿ ಲಕ್ಷ್ಮೀ ಪ್ರಸಾದ್ ಅವರಿಗೆ ಗಾರ್ಡ್ ಆಫ್ ಹಾನರ್ ನೀಡಲಾಯಿತು. ಜಿಲ್ಲೆಯ ಎಲ್ಲಾ ಠಾಣೆಗಳ ಇನ್ಸ್ಪೆಕ್ಟರ್ ಗಳ ಪರಿಚಯದ ಬಳಿಕ, ಅಧಿಕಾರ ಹಸ್ತಾಂತರ ಮಾಡಲಾಯಿತು.
ಶಿವಮೊಗ್ಗ ಚಾಲೆಂಜಿಂಗ್ ಜಿಲ್ಲೆ: ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ನೂತನ ಜಿಲ್ಲಾ ರಕ್ಷಣಾಧಿಕಾರಿ ಲಕ್ಷ್ಮೀ ಪ್ರಸಾದ್ ಅವರು, ಶಿವಮೊಗ್ಗ ಅತ್ಯಂತ ಚಾಲೆಂಜಿಂಗ್ ಜಿಲ್ಲೆ. ಇದನ್ನು ಅರ್ಥೈಸಿಕೊಂಡು, ಜನರ ಸಹಕಾರದೊಂದಿಗೆ ಉತ್ತಮವಾಗಿ ಕರ್ತವ್ಯ ನಿರ್ವಹಿಸುತ್ತೇವೆ. ಜನಸ್ನೇಹಿ ಪೊಲೀಸ್ ವ್ಯವಸ್ಥೆ ರೂಪಿಸುತ್ತೇವೆ ಎಂದು ತಿಳಿಸಿದರು.
ನಿರ್ಗಮಿತ ಎಸ್ಪಿಗೆ ಗಾರ್ಡ್ ಆಫ್ ಹಾನರ್
ನಿರ್ಗಮಿತ ಎಸ್ಪಿ ಕೆ.ಎಂ.ಶಾಂತರಾಜು ಅವರಿಗೆ ಪೊಲೀಸರು ಬೀಳ್ಕೊಡುಗೆ ನೀಡಿದರು. ಗಾರ್ಡ್ ಆಫ್ ಹಾನರ್ ಬಳಿಕ, ಪೊಲೀಸ್ ಸಿಬ್ಬಂದಿಗಳು ಐಪಿಎಸ್ ಅಧಿಕಾರಿ ಶಾಂತರಾಜು ಅವರಿಗೆ ಶುಭ ಕೋರಿದರು.





