ಎಂಬಿಎ ಪರೀಕ್ಷೆ: ಮಣೇಲ್ ಶ್ರೀನಿವಾಸ್ ನಾಯಕ್ ಸಂಸ್ಥೆಗೆ 4 ರ್ಯಾಂಕ್

ಮೇಘಾ ನರಸಿಂಹ ನಾಯಕ್, ರವಿರಾಜ್, ಅನುಷಾ, ಅಂಜನಾ
ಮಂಗಳೂರು, ಎ.2: ಬೆಸೆಂಟ್ ಸಮೂಹ ಸಂಸ್ಥೆಗೆ ಸೇರಿದ ನಗರದ ಬೋಂದೆಲ್ನಲ್ಲಿರುವ ಮಣೇಲ್ ಶ್ರೀನಿವಾಸ್ ನಾಯಕ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಸಂಸ್ಥೆಯು 2018-20ರ ಸಾಲಿನ ಮಂಗಳೂರು ವಿಶ್ವವಿದ್ಯಾನಿಲಯದ ಎಂಬಿಎ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಸಹಿತ 4 ರ್ಯಾಂಕ್ಗಳನ್ನು ತನ್ನದಾಗಿಸಿಕೊಂಡಿದೆ.
ಮೇಘಾ ನರಸಿಂಹ ನಾಯಕ್ ಎಂಬಿಎಯಲ್ಲಿ ಪ್ರಥಮ ರ್ಯಾಂಕ್ ಪಡೆದುಕೊಂಡಿದ್ದಾರೆ. ರವಿರಾಜ್ ಕುಮಾರ್ ಮತ್ತು ಅನುಷಾ ಕಾಮತ್ ಕ್ರಮವಾಗಿ ಮೂರನೇ ರ್ಯಾಂಕ ಹಂಚಿಕೊಂಡರೆ ಅಂಜನಾ ಟಿ.ವಿ. 5ನೇ ರ್ಯಾಂಕ್ ಪಡೆದುಕೊಂಡಿದ್ದಾರೆ.
ಪ್ರಥಮ ರ್ಯಾಂಕ್ ಪಡೆದ ಮೇಘಾ ನಾಯಕ್ ಮಂಗಳೂರು ವಿವಿಯ ವೈಶ್ಯ ಬ್ಯಾಂಕ್ ಗೋಲ್ಡ್ ಮೆಡಲ್, ರಾಮಕೃಷ್ಣ ಮಲ್ಯ ಗೋಲ್ಡ್ ಮೆಡಲ್ ಮತ್ತು ಡಾ. ಎಚ್.ಡಿ ಶಂಕರ್ ನಾರಾಯಣ ಗೋಲ್ಡ್ ಮೆಡಲ್ ಪ್ರಶಸ್ತಿಗಳನ್ನು ಕೂಡ ಗಳಿಸಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕಿ ಡಾ. ಮೊಲ್ಲಿ ಎಸ್. ಚೌಧುರಿ ತಿಳಿಸಿದ್ದಾರೆ.
Next Story





