ಮೈಸೂರು ಮೇಯರ್ ರುಕ್ಮಿಣಿ ಮಾದೇಗೌಡ ದಂಪತಿಗೆ ಕೊರೋನ ಸೋಂಕು ದೃಢ
ರುಕ್ಮಿಣಿ ಮಾದೇಗೌಡ
ಮೈಸೂರು,ಎ.2: ಮೈಸೂರು ಮಹಾನಗರ ಪಾಲಿಕೆ ಮೇಯರ್ ರುಕ್ಮಿಣಿ ಮಾದೇಗೌಡ ದಂಪತಿಗೆ ಕೊರೋನ ಸೋಂಕು ದೃಢಪಟ್ಟಿದೆ.
ಮೇಯರ್ ಆದ ನಂತರ ರುಕ್ಮಿಣಿ ಅವರು ಹಲವಾರು ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಅಲ್ಲದೇ, ಕಳೆದ ತಿಂಗಳು 13 ರಂದು ಕೋವಿಡ್ ಲಸಿಕೆಯನ್ನು ಪಡೆದಿದ್ದರು. ಇದಿಗ ಅವರಿಗೆ ಕೊರೋನ ಸೋಂಕು ದೃಡಪಟ್ಟಿದೆ.
ಮೇಯರ್ ಪತಿ ಮಾದೇಗೌಡ ಅವರಿಗೂ ಕೊರೋನ ತಗುಲಿದ್ದು, ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
Next Story