ಎ.3 : ಯುನಿವೆಫ್ ನಿಂದ ಬೆಂಗ್ರೆಯಲ್ಲಿ "ಯುವಕರ ಸಮಾಗಮ"
ಮಂಗಳೂರು : ಯುನಿವೆಫ್ ಕರ್ನಾಟಕ ಬೆಂಗ್ರೆ ಶಾಖೆಯ ವತಿಯಿಂದ ಎ.3ರ ಸಂಜೆ 7 ಗಂಟೆಗೆ ಬೆಂಗ್ರೆ ಕಸಬಾದ ಫುಟ್ಬಾಲ್ ಪೆವಿಲಿಯನ್ ನಲ್ಲಿ "ಯುವಕರ ಸಮಾಗಮ" ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮದಲ್ಲಿ "ಮುಸ್ಲಿಂ ಸಮುದಾಯ-ಭೂತ, ವರ್ತಮಾನ ಮತ್ತು ಭವಿಷ್ಯ" ಎಂಬ ವಿಷಯದಲ್ಲಿ ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿಯವರಿಂದ ಯುವ ಜಾಗೃತಿ ಕಾರ್ಯಕ್ರಮ ನಡೆಯಲಿದೆ. ಹೆಚ್ಚಿನ ವಿವರಗಳಿಗೆ ಮೊಬೈಲ್ ಸಂಖ್ಯೆ 8105978369ನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.
Next Story





