ಜಮಾಅತುಲ್ ಮುಸ್ಲಿಮೀನ್ ಮುಖ್ಯ ಖಾಜಿಯಾಗಿ ಮೌಲಾನಾ ಅಬ್ದುಲ್ ರಬ್ ಖತೀಬಿ ನದ್ವಿ

ಭಟ್ಕಳ : ಭಟ್ಕಳದ ಪ್ರಸಿದ್ಧ ಧಾರ್ಮಿಕ ವಿದ್ವಾಂಸ ಮೌಲಾನಾ ಅಬ್ದುಲ್ ರಬ್ ಖತೀಬಿ ನದ್ವಿ ಇಲ್ಲಿನ ಜಮಾಅತುಲ್ ಮುಸ್ಲಿಮೀನ್ ಇದರ ಮುಖ್ಯ ಖಾಝಿಯಾಗಿ ಶುಕ್ರವಾರ ನೇಮಕಗೊಂಡರು.
ಖ್ಯಾತ ವಿದ್ವಾಂಸ ಮೌಲಾನ ಇಕ್ಬಾಲ್ ಮುಲ್ಲಾ ರವರ ನಿಧನದಿಂದಾಗಿ ತೆರವಾಗಿದ್ದ ಸ್ಥಾನಕ್ಕೆ ಇಂದು ಜಾಮಿಯಾ ಮಸೀದಿಯಲ್ಲಿ ಸಭೆ ಸೇರಿದ ಖಮರುಲ್ ಮುಸ್ಲಿಮೀನ್ ಕಾರ್ಯಕಾರಿ ಸಮಿತಿ ಈ ನಿರ್ಣಯ ಕೈಗೊಂಡಿದೆ. ಸಂಸ್ಥೆಯ ಅಧ್ಯಕ್ಷ ಜಾನ್ ಅಬ್ದುಲ್ ರೆಹಮಾನ್ ಮೊಹ್ತಾಶಮ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
58 ವರ್ಷದ ಮೌಲಾನಾ ಅಬ್ದುಲ್ ರಬ್ ನದ್ವಿಯ ತಂದೆ ಮುಹಮ್ಮದ್ ಅಹ್ಮದ್ ಖತಿಬಿ ಉಪ ಮುಖ್ಯ ಖಾಜಿಯಾಗಿದ್ದರು. ಮೌಲಾನಾ ಅಬ್ದುಲ್ ರಬ್ ನದ್ವಿ 25 ವರ್ಷಗಳಿಗೂ ಹೆಚ್ಚು ಕಾಲ ಜಮಾತೆ-ಎ-ಮುಸ್ಲೀಮೀನ್ ಭಟ್ಕಲ್ ಅವರ ಉಪ ಖಾಜಿಯಾಗಿದ್ದರು. ಜಾಮಿಯಾ ಇಸ್ಲಾಮಿಯಾ ಶಿಕ್ಷಣ ಸಂಸ್ಥೆಯ ಪದವಿ ಪಡೆದ ಇವರು ನಂತರ, ದಾರುಲ್ ಉಲೂಮ್ ನದ್ವಾತ್ ಉಲೆಮಾದಲ್ಲಿ ಹದೀಸ್ ವಿಭಾಗದಲ್ಲಿ ಪರಿಣತಿ ಪಡೆದರು.
ಅವರು ಅನೇಕ ವರ್ಷಗಳಿಂದ ಭಟ್ಕಲ್ ಇಸ್ಲಾಮಿಕ್ ವಿಶ್ವವಿದ್ಯಾಲಯದಲ್ಲಿ ಬೋಧಿಸುತ್ತಿದ್ದಾರೆ. ಅವರು. ನ್ಯಾಯಶಾಸ್ತ್ರ ಮತ್ತು ಸಾಹಿತ್ಯದ ಶ್ರೇಷ್ಠ ಶಿಕ್ಷಕರಲ್ಲಿ ಒಬ್ಬರು. ಮೌಲಾನಾ ಅಬ್ದುಲ್ ರಬ್ ಖತೀಬ್ ನದ್ವಿ ಸಾಹಿಬ್ ಖಾಜಿಯವರ ನೇಮಕ ಕುರಿತು ಅವರಿಗೆ ವಿವಿಧ ಸಂಸ್ಥೆಗಳ ಅಧಿಕಾರಿ ಗಳು ಅಭಿನಂದನಾ ಸಂದೇಶಗಳನ್ನು ನೀಡುತ್ತಿದ್ದಾರೆ.





