ಭಾಷಣ ನಿಲ್ಲಿಸಿ, ಬಿಜೆಪಿ ಕಾರ್ಯಕರ್ತನ ಆರೋಗ್ಯ ತಪಾಸಣೆ ಮಾಡುವಂತೆ ಸೂಚಿಸಿದ ಪ್ರಧಾನಿ ಮೋದಿ

ಗುವಾಹಟಿ: ರಾಜ್ಯದಲ್ಲಿ ಮೂರನೇ ಹಾಗೂ ಅಂತಿಮ ಹಂತದ ವಿಧಾನಸಭಾ ಚುನಾವಣೆಗೆ ಮುನ್ನ ತಮುಲ್ಪುರದಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಇಂದು ಅಸ್ಸಾಂಗೆ ತೆರಳಿದ್ದರು.
ಪ್ರಧಾನಿ ಭಾಷಣ ಮಾಡುತ್ತಿರುವಾಗ ಭಾಷಣವನ್ನು ಅರ್ಧಕ್ಕೆ ನಿಲ್ಲಿಸಿ, ನಿರ್ಜಲೀಕರಣದಿಂದ ಬಸವಳಿದಿದ್ದ ಬಿಜೆಪಿ ಕಾರ್ಯಕರ್ತನಿಗೆ ಸಹಾಯ ಮಾಡುವಂತೆ ತನ್ನೊಂದಿಗೆ ಬಂದಿರುವ ವೈದ್ಯಕೀಯ ತಂಡಕ್ಕೆ ನಿರ್ದೇಶಿಸಿದರು. ಈ ಮೂಲಕ ನೆರೆದಿದ್ದ ಜನರ ಗಮನವನ್ನು ಕಾರ್ಯಕರ್ತನತ್ತ ಹರಿಯುವಂತೆ ಮಾಡಿದರು.
ಪಿಎಂಒ ವೈದ್ಯಕೀಯ ತಂಡ ದಯವಿಟ್ಟು ಹೋಗಿ ನಿರ್ಜಲೀಕರಣ(ನೀರಿನ ಕೊರತೆ)ದಿಂದಾಗಿ ಸಮಸ್ಯೆಗಳನ್ನು ಎದುರಿಸುತ್ತಿರುವ ಕಾರ್ಯಕರ್ತನನ್ನು ನೋಡಿ. ನನ್ನೊಂದಿಗೆ ಬಂದಿರುವ ವೈದ್ಯರು ದಯವಿಟ್ಟು ಆತನಿಗೆ ತಕ್ಷಣವೇ ಸಹಾಯ ಮಾಡಿ ಎಂದು ಪ್ರಧಾನಿ ಮೋದಿ ಕೇಳಿಕೊಂಡರು.
ನಾಲ್ವರು ಸದಸ್ಯರನ್ನು ಒಳಗೊಂಡ ವೈದ್ಯಕೀಯ ತಜ್ಞರು ಶಿಷ್ಟಾಚಾರದ ಪ್ರಕಾರ ಪ್ರಧಾನಿಯೊಂದಿಗೆ ಪ್ರಯಾಣಿಸುತ್ತಾರೆ. ಈ ತಂಡದಲ್ಲಿ ವೈಯಕ್ತಿಕ ವೈದ್ಯರು, ಅರೆ ವೈದ್ಯರು, ಶಸ್ತ್ರಚಿಕಿತ್ಸಕ ಹಾಗೂ ಗಂಭೀರ ಪರಿಸ್ಥಿತಿಯ ಆರೈಕೆ ತಜ್ಞರು ಇರುತ್ತಾರೆ.
#WATCH: During a rally in Assam's Tamalpur, PM Narendra Modi asked his medical team to help a party worker who faced issues due to dehydration.#AssamAssemblyPolls pic.twitter.com/3Q70GPrtWs
— ANI (@ANI) April 3, 2021