ಆರ್ಸಿಬಿ ಆರಂಭಿಕ ಬ್ಯಾಟ್ಸ್ ಮನ್ ಗೆ ಕೋವಿಡ್ ಪಾಸಿಟಿವ್

ಹೊಸದಿಲ್ಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ಬ್ಯಾಟ್ಸ್ ಮನ್ ದೇವದತ್ ಪಡಿಕ್ಕಲ್ ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆಗಿದ್ದು, ತಂಡದಿಂದ ಬೇರ್ಪಟ್ಟು ಐಸೋಲೇಶನ್ ಗೆ ಒಳಗಾಗಿದ್ದಾರೆಂದು ತಿಳಿದು ಬಂದಿದೆ. ನಿತೀಶ್ ರಾಣಾ ಹಾಗೂ ಅಕ್ಷರ್ ಪಟೇಲ್ ಬಳಿಕ ಕೋವಿಡ್ ಪಾಸಿಟಿವ್ ಆದ ಮೂರನೇ ಆಟಗಾರನಾಗಿದ್ದಾರೆ ಪಡಿಕ್ಕಲ್.
ಈ ಕಾರಣದಿಂದಾಗಿ ಸದ್ಯ ದೇವದತ್ ಪಡಿಕ್ಕಲ್ ಆರ್ಸಿಬಿ ಪರ ಮೊದಲೆರಡು ಪಂದ್ಯಗಳಿಗೆ ಅಲಭ್ಯರಾಗುವ ಸಾಧ್ಯತೆಯಿದೆ ಎಂದು ತಿಳಿದು ಬಂದಿದೆ. ಶನಿವಾರದಂದು ಡೆಲ್ಲಿ ಕ್ಯಾಪಿಟಲ್ಸ್ ತಂಡದ ಅಕ್ಷರ್ ಪಟೇಲ್ ಕೊರೋನ ಪಾಸಿಟಿವ್ ಆಗಿದ್ದರು. ದಿಲ್ಲಿ ತಂಡವು ಸದ್ಯ ಮುಂಬೈನಲ್ಲಿದ್ದರೆ, ಆರ್ಸಿಬಿ ತಂಡವು ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದೆ.
ಪಡಿಕ್ಕಲ್ ತಮ್ಮ 15 ಐಪಿಎಲ್ ಪಂದ್ಯಗಳಲ್ಲಿ 31.53 ಸರಾಸರಿಯಲ್ಲಿ 473 ರನ್ ಗಳಿಸಿದ್ದಾರೆ.
Next Story