ಸುರತ್ಕಲ್: ಬೀಚ್ ಬಳಿ ಡ್ರೆಜ್ಜರ್ ಕಾವಲುಗಾರ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ

ಮಂಗಳೂರು, ಎ.5: ಸುರತ್ಕಲ್ ಸಮೀಪದ ಗುಡ್ಡೆಕೊಪ್ಪಳ ಬಳಿ ಡ್ರೆಜ್ಜರ್ ಕಾವಲುಗಾರನ ಮೃತದೇಹ ಶಂಕಾಸ್ಪದ ರೀತಿಯಲ್ಲಿ ಸೋಮವಾರ ಪತ್ತೆಯಾಗಿದೆ. ಮೃತರನ್ನು ಶಂಕರ್(32) ಎಂದು ಗುರುತಿಸಲಾಗಿದೆ.
ಉತ್ತರ ಕರ್ನಾಟಕ ಮೂಲದವರಾದ ಶಂಕರ್ ಕೆಲವು ದಿನಗಳ ಹಿಂದೆ ‘ಭಗವತಿ ಪ್ರೇಮ್’ ಎಂಬ ಡ್ರೆಜ್ಜರ್‌ನ ಕಾವಲುಗಾರನಾಗಿ ಸೇರ್ಪಡೆಗೊಂಡಿದ್ದರು. ಇವರು ರವಿವಾರ ರಾತ್ರಿ 11 ಗಂಟೆಯವರೆಗೆ ಇನ್ನೊಬ್ಬ ಕಾವಲುಗಾರ ಜೊತೆಯಲ್ಲಿಯೇ ಇದ್ದರು ಎನ್ನಲಾಗಿದೆ. ಸೋಮವಾರ ಮುಂಜಾನೆ ಶಂಕರ್ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಈ ಬಗ್ಗೆ ಸುರತ್ಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಮುಂದುವರಿಸಿದ್ದಾರೆ.
Next Story





