ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ನಿವಾಸಕ್ಕೆ ಬಿಜೆಪಿ ಮುಖಂಡರ ಭೇಟಿ

ಬೆಂಗಳೂರು, ಎ.5: ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಹೋದರ, ಕಾಂಗ್ರೆಸ್ ಮುಖಂಡ ಲಖನ್ ಜಾರಕಿಹೊಳಿ ನಿವಾಸಕ್ಕೆ ಬಿಜೆಪಿ ಮುಖಂಡರು ದಂಡು ಭೇಟಿ ನೀಡಿದ್ದು ರಾಜಕೀಯ ಕುತೂಹಲಕ್ಕೆ ಕಾರವಾಗಿದೆ.
ಬೆಳಗಾವಿ ಲೋಕಸಭೆ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಪರ ಸೋಮವಾರ ಗೋಕಾಕ್ ತಾಲೂಕಿನಲ್ಲಿ ಪ್ರಚಾರ ಕೈಗೊಂಡಿದ್ದ ಸಚಿವರಾದ ಜಗದೀಶ್ ಶೆಟ್ಟರ್, ಭೈರತಿ ಬಸವರಾಜು, ಉಮೇಶ್ ಕತ್ತಿ ಸೇರಿ ಇನ್ನಿತರರು ಇದೇ ವೇಳೆ ಗೋಕಾಕ್ ಪಟ್ಟಣದಲ್ಲಿರುವ ಗೋಕಾಕ್ ವಿಧಾನಸಭೆ ಪರಾಜಿತ ಕಾಂಗ್ರೆಸ್ ಅಭ್ಯರ್ಥಿ ಲಖನ್ ಜಾರಕಿಹೊಳಿ ಮನೆಗೆ ಭೇಟಿ ನೀಡಿದರು. ಬಿಜೆಪಿ ನಾಯಕರನ್ನು ಲಖನ್ ಆತ್ಮೀಯವಾಗಿ ಬರಮಾಡಿಕೊಂಡರು.
ಇತ್ತಿಚೆಗಷ್ಟೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಲಖನ್ ಜಾರಕಿಹೊಳಿ ಆಗ್ರಹಿಸಿದ್ದರು. ಇದೀಗ ಬಿಜೆಪಿ ಸಚಿವರ ಭೇಟಿಯಿಂದ ತೀವ್ರ ಕುತೂಹಲ ಮೂಡಿದ್ದು. ಲಖನ್ ಏನಾದ್ರು ಬಿಜೆಪಿ ಪಕ್ಷದ ಕಡೆ ಮುಖ ಮಾಡುತ್ತಾರಾ ಎಂಬ ಅನುಮಾನ ಮೂಡಿಸಿದೆ.
ಆದರೆ, ಇನ್ನೊಬ್ಬ ಸಹೋದರ ಸತೀಶ್ ಜಾರಕಿಹೊಳಿ ಚುನಾವಣೆಯಲ್ಲಿ ಸ್ಪರ್ಧಿಸಿರುವ ಹಿನ್ನೆಲೆಯಲ್ಲಿ ಮುಂದಿನ ಲಖನ್ ನಡೆ ತೀವ್ರ ಸಂಚಲನಕ್ಕೆ ಕಾರಣವಾಗಿದೆ.







