ಬಾರಕೂರಿನಲ್ಲಿ ವಿಜಯನಗರ ಕಾಲದ ಶಾಸನ ಪತ್ತೆ

ಉಡುಪಿ, ಎ.5: ಬಾರಕೂರಿನ ಮಣಿಗಾರ ಕೇರಿಯ ಸೋಮನಾಥೇಶ್ವರ ದೇವಸ್ಥಾನದ ಆವರಣದಲ್ಲಿ ಮಣ್ಣಿನ ಅಡಿಯಲ್ಲಿ ಶಿಲಾಶಾಸನ ಪತ್ತೆಯಾ ಗಿದೆ ಎಂದು ಖ್ಯಾತ ಇತಿಹಾಸಜ್ಞರಾಗಿರುವ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದ ಆಡಳಿತಾಧಿಕಾರಿ ಡಾ. ಬಿ. ಜಗದೀಶ್ ಶೆಟ್ಟಿ ತಿಳಿಸಿದ್ದಾರೆ.
ಅದು ವಿಜಯನಗರಕಾಲದ ಶಾಸನವಾಗಿದ್ದು ಸೋಮನಾಥೇಶ್ವರ ದೇವಸ್ಥಾನದ ಉಲ್ಲೇಖ ಹಾಗೂ ದಾನನೀಡಿದ ವಿವರಗಳಿವೆ. ಅವುಗಳ ಅಧ್ಯಯ ನವನ್ನು ಸಂಶೋಧಕ ಶ್ರುತೇಶ್ ಆಚಾರ್ಯ ಅವರ ಸಹಾಯದಿಂದ ಮಾಡಲಾಗುತ್ತಿದೆ ಎಂದವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story





