ಸಜಿಪನಡು: ಎ.9ರಂದು ರಹ್ಮಾನ್ ಮಸೀದಿಯಲ್ಲಿ ಜುಮಾ ನಮಾಝ್ ಗೆ ಚಾಲನೆ
ಬಂಟ್ವಾಳ, ಎ.5: ಕೇಂದ್ರ ಜುಮಾ ಮಸೀದಿ ಸಜಿಪನಡು ಇದರ ಅಧೀನದಲ್ಲಿರುವ ಬೋಳಮೆ ಎಂಬಲ್ಲಿನ ರಹ್ಮಾನ್ ಜುಮಾ ಮಸೀದಿಯಲ್ಲಿ ನೂತನ ಜುಮಾ ನಮಾಝ್ ಗೆ ಎ.9ರಂದು ಶುಕ್ರವಾರ ಚಾಲನೆ ಸಿಗಲಿದೆ.
ಅಸ್ಸಯ್ಯದ್ ಕೆ.ಎಸ್ ಅಲಿ ತಂಙಲ್ ಕುಂಬೊಲ್ ರವರು ಕುತುಬಾ ಪಾರಾಯಣದೊಂದಿಗೆ ಜುಮಾ ನಮಾಝ್ ಗೆ ಚಾಲನೆ ನೀಡಲಿದ್ದಾರೆ. ಸಜಿಪ ಕೇಂದ್ರ ಜುಮಾ ಮಸೀದಿ ಖತೀಬ್ ಅಲ್ಹಾಜ್ ಅಬೂಸ್ವಾಲಿಹ್ ಪೈಝಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕೆ.ಪಿ ಇರ್ಷಾದ್ ದಾರಿಮಿ ಅಲ್- ಜ ಝರಿ ಮಿತ್ತಬೈಲ್ ಅವರು ಮುಖ್ಯ ಪ್ರಭಾಷಣ ಮಾಡಲಿದ್ದಾರೆ. ಹಲವಾರು ಉಲಮಾ- ಉಮರಾ ನಾಯಕರುಗಳು ಭಾಗವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story





