ಮಹಾರಾಷ್ಟ್ರದ ಗೃಹ ಸಚಿವರಾಗಿ ದಿಲಿಪ್ ವಾಲ್ಸೆ ಪಾಟೀಲ್ ಆಯ್ಕೆ

ಮುಂಬೈ: ಗೃಹ ಸಚಿವ ಅನಿಲ್ ದೇಶ್ ಮುಖ್ ನೀಡಿರುವ ರಾಜೀನಾಮೆ ಪತ್ರವನ್ನು ರಾಜ್ಯಪಾಲ ಭಗತ್ ಸಿಂಗ್ ಕೊಶಿಯಾರಿಗೆ ಕಳುಹಿಸಿಕೊಟ್ಟಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ , ಎನ್ ಸಿಪಿ ನಾಯಕ ದಿಲಿಪ್ ವಾಲ್ಸೆ ಪಾಟೀಲ್ ರಾಜ್ಯ ಗೃಹ ಇಲಾಖೆಯ ಉಸ್ತುವಾರಿ ವಹಿಸಿಕೊಳ್ಳಲಿದ್ದಾರೆ ಎಂದು ರಾಜ್ಯಪಾಲರಿಗೆ ಮಾಹಿತಿ ನೀಡಿದ್ದಾರೆ.
ಪಾಟೀಲ್ ಪ್ರಸ್ತುತ ರಾಜ್ಯ ಕಾರ್ಮಿಕ ಹಾಗೂ ಅಬಕಾರಿ ಸಚಿವರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಾರಾಷ್ಟ್ರ ಸರಕಾರವು ಅಬಕಾರಿ ಖಾತೆಯನ್ನು ಉಪ ಮುಖ್ಯಮಂತ್ರಿ, ವಿತ್ತ ಸಚಿವರಾದ ಅಜಿತ್ ಪವಾರ್ ಗೆ ಹಾಗೂ ಕಾರ್ಮಿಕ ಖಾತೆಯನ್ನು ಹಸನ್ ಮುಶ್ರಿಫ್ ಗೆ ನೀಡಲು ನಿರ್ಧರಿಸಿದೆ.
ದಿಲಿಪ್ ಪಾಟೀಲ್ ಅವರು ಮಾಜಿ ಕಾಂಗ್ರೆಸ್ ಶಾಸಕ ಹಾಗೂ ಶರದ್ ಪವಾರ್ ಸ್ನೇಹಿತ ದತ್ತಾತ್ರೇಯ ವಾಲ್ಸೆ ಪಾಟೀಲರ ಪುತ್ರರಾಗಿದ್ದು, 1990ರಲ್ಲಿ ಮೊದಲ ಬಾರಿ ಕಾಂಗ್ರೆಸ್ ಟಿಕೆಟ್ ನಲ್ಲಿ ಅಂಬೆಗಾಂವ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಈಗಲೂ ಅದೇ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.
Next Story





