ಉಡುಪಿ: ಗ್ರಾಪಂಗಳಿಗೆ ಕಸ ವಿಲೇವಾರಿ ವಾಹನ ವಿತರಣೆ

ಉಡುಪಿ, ಎ.5: ಜಿಪಂ ಅಧ್ಯಕ್ಷರ ವಿಶೇಷ ಮುತುವರ್ಜಿಯಿಂದ, ಸ್ವಚ್ಛಬಾರತ್ ಅಭಿಯಾನ ಯೋಜನೆಯಡಿ ಜಿಲ್ಲೆಯಲ್ಲಿ ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಲು ವಿವಿಧ ಗ್ರಾಮ ಪಂಚಾಯತ್‌ಗಳಿಗೆ ಕಸ ವಿಲೇವಾರಿ ವಾಹನಗಳನ್ನು ಮಣಿಪಾಲದ ಜಿಲ್ಲಾ ಪಂಚಾಯತ್ ಆವರಣದಲ್ಲಿ ಇಂದು ಅಧ್ಯಕ್ಷ ದಿನಕರ ಬಾಬು ವಿತರಿಸಿದರು.
ಕಾರ್ಯಕ್ರಮದಲ್ಲಿ ಜಿಪಂ ಉಪಾಧ್ಯಕ್ಷೆ ಶೀಲಾ ಕೆ. ಶೆಟ್ಟಿ, ಜಿಪಂ ಸ್ಥಾಯಿ ಸಮಿತಿ ಸದಸ್ಯ ರಾದ ಶೋಭಾ ಜಿ. ಪುತ್ರನ್, ಸುಮಿತ್ ಶೆಟ್ಟಿ ಕೌಡೂರು, ಪ್ರತಾಪ್ ಹೆಗ್ಡೆ ಮಾರಾಳಿ, ಸಿಇಓ ಡಾ.ನವೀನ್ ಭಟ್ ಮತ್ತಿತರರು ಉಪಸ್ಥಿತರಿದ್ದರು.
Next Story





