ಅಕ್ಕಮಹಾದೇವಿ ಪ್ರಶಸ್ತಿಗಳಿಗಾಗಿ ಅರ್ಜಿ ಆಹ್ವಾನ
ಬೆಳಗಾವಿ, ಎ. 5: ಪ್ರತಿ ವರ್ಷದಂತೆ ಈ ವರ್ಷವೂ, ಅಕ್ಕಮಹಾದೇವಿಯವರ ಜಯಂತಿ ಹಿನ್ನೆಲೆಯಲ್ಲಿ ಮಹಿಳಾ ಸಬಲೀಕರಣದ ದೃಷ್ಟಿಯಿಂದ ಅಕ್ಕಮಹಾದೇವಿಯವರ ಹೆಸರಿನಲ್ಲಿ ರಾಜ್ಯ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದ್ದು ಅರ್ಜಿ ಆಹ್ವಾನಿಸಲಾಗಿದೆ.
‘ಅಕ್ಷರ ಮಾತೆ ಅಕ್ಕಮಹಾದೇವಿ' ಪ್ರಶಸ್ತಿಗೆ ಅಂಗನವಾಡಿಯಿಂದ ಉನ್ನತ ಶಿಕ್ಷಣದವರೆಗಿನ ಶಿಕ್ಷಕಿಯರಿಗೆ ಪ್ರಶಸ್ತಿ ನೀಡಲಿದ್ದು, ಶಿಕ್ಷಕಿಯರು ವೈಚಾರಿಕ ಚಿಂತಕರಾಗಿರಬೇಕು. ಬಸವಾದಿ ಶರಣರ ಚಳುವಳಿ ಮತ್ತು ಲಿಂಗಾಯತ ಧರ್ಮದ ಬಗ್ಗೆ ತಿಳಿದವರಾಗಿರಬೇಕು. ‘ಕನ್ನಡದ ತಾಯಿ ಅಕ್ಕಮಹಾದೇವಿ ಪ್ರಶಸ್ತಿಗೆ ಪ್ರಗತಿಪರ ಚಿಂತನೆಯ ಮಹಿಳಾ ಶರಣ ಸಾಹಿತಿಗಳು, ಕವಯತ್ರಿಯರು ಮತ್ತು ಲಿಂಗಾಯತ ಧರ್ಮದ ಪ್ರಚಾರಕಿಯರಿಗೆ. ‘ನಾರಿ ಕುಲ ತಿಲಕ ಅಕ್ಕಮಹಾದೇವಿ' ಕನ್ನಡ ಮತ್ತು ಮಹಿಳಾ ಹೋರಾಟಗಾರ್ತಿಯರಿಗೆ ನೀಡಲಾಗುವುದು.
ಪೊಲಿಸ್ ಇಲಾಖೆ ಸೇರಿದಂತೆ ರಕ್ಷಣಾ ಇಲಾಖೆಗಳು ಹಾಗೂ ಅರಣ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೀರ ಸಹೋದರಿಯರಿಗೆ ‘ವೀರ ವನಿತೆ ಅಕ್ಕಮಹಾದೇವಿ' ಹಾಗೂ ಹಿರಿಯ ತಾಯಂದಿರಿಗೆ ‘ಜಗನ್ಮಾತೆ ಅಕ್ಕಮಹಾದೇವಿ ಜೀವಮಾನ ಸಾಧನೆ' ಪ್ರಶಸ್ತಿಯನ್ನು ನೀಡಲು ಅರ್ಜಿಗಳನ್ನು ಆಹ್ವಾನ ಮಾಡಲಾಗಿದೆ.
ಆಸಕ್ತ ಹಾಗೂ ದಾಸೋಹ ಮನೋಭಾವದ ಮಹಿಳೆಯರು. ಎ.20ರೊಳಗಾಗಿ, ತಮ್ಮ ಸ್ವವಿವರ ಹಾಗೂ ಇತ್ತೀಚಿನ ಒಂದು ಭಾವಚಿತ್ರದೊಂದಿಗೆ, ‘ಆರ್.ಎಸ್.ದರ್ಗೆ, ಅಧ್ಯಕ್ಷರು, ಬಸವ ಭೀಮ ಸೇನೆ, ಮ.ನಂ. 47, 2ನೆ ಮುಖ್ಯರಸ್ತೆ ಶಿವಾಜಿನಗರ, ಬೆಳಗಾವಿ' ಈ ವಿಳಾಸಕ್ಕೆ ಅಂಚೆ ಮೂಲಕ ಕಳುಹಿಸಬೇಕು. ಎ.23 ರಂದು ಕಾರ್ಯಕ್ರಮದ ಸ್ಥಳ, ಸಾಧಕರ ಆಯ್ಕೆ ಹಾಗೂ ಆಮಂತ್ರಣ ಪ್ರಕಟಿಸಲಾಗುವುದು ಎಂದು ತಿಳಿಸಲಾಗಿದೆ.
ಎ.27ಕ್ಕೆ ಅಕ್ಕಮಹಾದೇವಿಯವರ ಜಯಂತಿ ಇದ್ದು ಅಂದು ಬೆಳಗ್ಗೆ 10.30ಕ್ಕೆ ಆಯೋಜಿಸಲಾಗುವ ಕಾರ್ಯಕ್ರಮದಲ್ಲಿ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ಮೊಬೈಲ್ ಸಂಖ್ಯೆ-99867 10560ಗೆ ಸಂಪರ್ಕಿಸುವಂತೆ ಬಸವ ಭೀಮ ಸೇನೆಯ ಅಧ್ಯಕ್ಷ ಆರ್.ಎಸ್.ದರ್ಗೆ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







