ಮೃತ ಪುತ್ರನಿಗೆ ಟಿಕೆಟ್ ಖರೀದಿಸಿ ಫೋಟೊ ಜೊತೆ 'ಯುವರತ್ನ' ಸಿನೆಮಾ ವೀಕ್ಷಿಸಿದ ಹೆತ್ತವರು

ಮೈಸೂರು,ಎ.5: ನಿಧನ ಹೊಂದಿರುವ ಮಗನ ಫೋಟೋಗೂ ಟಿಕೆಟ್ ಕೊಂಡು ಪುನೀತ್ ರಾಜ್‍ಕುಮಾರ್ ಅಭಿನಯದ "ಯುವರತ್ನ" ಸಿನಿಮಾ ನೋಡಿದ ಪೋಷಕರು ಮಗನ ನೆನಸಿಕೊಂಡು ಕಣ್ಣೀರಿಟ್ಟ ಘಟನೆ ಮೈಸೂರಿನಲ್ಲಿ ನಡೆದಿದೆ.
ಮೈಸೂರಿನ ನಿವಾಸಿ ಮುರಳೀಧರ್ ಎಂಬವರು ನಗರದ ಡಿ.ಆರ್. ಚಿತ್ರಮಂದಿರದಲ್ಲಿ ತಮ್ಮ ಮೃತ ಮಗ ಹರಿಕೃಷ್ಣ ಅವರ ಫೋಟೊಗೂ ಟಿಕೆಟ್ ಪಡೆದು ಪತ್ನಿ ಮತ್ತು ಹಿರಿಯ ಪುತ್ರನೊಟ್ಟಿಗೆ ಯುವರತ್ನ ಸಿನಿಮಾ ವೀಕ್ಷಿಸಿದರು.
ಮೈಸೂರಿನ ನಿವಾಸಿ ಮುರಳೀಧರ್ ಅವರ ಮಗ ಹರಿಕೃಷ್ಣ ಪುನೀತ್ ರಾಜ್ ಕುಮಾರ್ ಅವರು ಅಪ್ಪಟ ಅಭಿಮಾನಿಯಾಗಿದ್ದ. ಪುನೀತ್ ರಾಜ್ ಕುಮಾರ್ ಅಭಿನಯದ ಯುವರತ್ನ ಸಿನಿಮಾ ನೋಡಬೇಕೆಂದು ಆಸೆ ಪಟ್ಟಿದ್ದ, ಆದರೆ ಕಳೆದ ನಾಲ್ಕು ತಿಂಗಳುಗಳ ಹಿಂದೆ ಸ್ನೇಹಿತರೊಡನೆ ವರುಣ ಕೆರೆಯಲ್ಲಿ ಈಜಲು ಹೋಗಿ ಮೃತಪಟ್ಟಿದ್ದ.
ಈತ ಬದುಕಿದ್ದಾಗ ಪುನೀತ್ ಅಭಿನಯದ ಯುವರತ್ನ ಸಿನಿಮಾ ನೋಡಲೇಬೇಕು ಎಂದು ಹೇಳುತ್ತಿದ್ದ. ಹಾಗಾಗಿ ಅವರ ತಂದೆ ಅವನ ಆಸೆ ನೆರವೇರಿಸಲು ಅವನ ಫೋಟೋ ತೆಗೆದುಕೊಂಡು ಹೋಗಿ ಅವನಿಗೂ ಒಂದು ಟಿಕೆಟ್ ಪಡೆದು ಥಿಯೇಟರ್ ಸೀಟಿನಲ್ಲಿಫೋಟೋ ಇಟ್ಟು ತಂದೆ, ತಾಯಿ ಮತ್ತು ಅಣ್ಣ ಚಿತ್ರ ವೀಕ್ಷಣೆ ಮಾಡಿದ್ದಾರೆ.





