ಬಾಂಗ್ಲಾ: ದೋಣಿ ಮುಳುಗಿ 26 ಸಾವು

ಢಾಕಾ (ಬಾಂಗ್ಲಾದೇಶ), ಎ. 5: ಬಾಂಗ್ಲಾದೇಶದಲ್ಲಿ ದೋಣಿ ಮುಳುಗಿ ಸಂಭವಿಸಿದ ದುರಂತದಲ್ಲಿ ಮೃತಪಟ್ಟವರ ಸಂಖ್ಯೆ ಸೋಮವಾರ 26ಕ್ಕೇರಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ನಾರಾಯಣಗಂಜ್ ಜಿಲ್ಲೆಯಲ್ಲಿರುವ ಶೀತಲಕ್ಷ ನದಿಯಲ್ಲಿ ಮುಳುಗಿದ ದೋಣಿಯನ್ನು ಸೋಮವಾರ ಮೇಲೆತ್ತಿದಾಗ ಅದರೊಳಗೆ ಹಲವಾರು ಮೃತದೇಹಗಳು ಪತ್ತೆಯಾದವು.
ಎರಡು ಅಂತಸ್ತುಗಳ ‘ಸಬಿತ್ ಅಲ್ ಹಸನ್’ ದೋಣಿಯು ರವಿವಾರ ದೊಡ್ಡ ಸರಕು ಹಡಗೊಂದಕ್ಕೆ ಢಿಕ್ಕಿ ಹೊಡೆದ ಬಳಿಕ ಮುಳುಗಿತ್ತು. ಅಪಘಾತ ಸಂಭವಿಸುವ ಸುಮಾರು ಒಂದು ಗಂಟೆಯ ಮೊದಲು ದೋಣಿಯು ಢಾಕಾದಿಂದ ಸುಮಾರು 20 ಕಿ.ಮೀ. ದೂರದಲ್ಲಿರುವ ನಾರಾಯಣಗಂಜ್‌ನಿಂದ ಹೊರಟಿತ್ತು.
ದೋಣಿಯಲ್ಲಿ ಕನಿಷ್ಠ 46 ಮಂದಿ ಪ್ರಯಾಣಿಸುತ್ತಿದ್ದರು. ಸುಮಾರು 20 ಮಂದಿ ಈಜಿ ದಡ ಸೇರಿದರು.
Next Story