ಸೈಕಲ್ನಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸಿ ಅಚ್ಚರಿ ಮೂಡಿಸಿದ ನಟ ವಿಜಯ್
Photo: Twitter
ಚೆನ್ನೈ: ತಮಿಳು ಚಿತ್ರರಂಗದ ಖ್ಯಾತ ನಟ ವಿಜಯ್ ಇಂದು ಚೆನ್ನೈ ನಗರದ ನೀಲಂಕರೈ ಎಂಬಲ್ಲಿರುವ ಮತದಾನ ಕೇಂದ್ರಕ್ಕೆ ಸೈಕಲ್ನಲ್ಲಿ ಆಗಮಿಸಿ ತಮ್ಮ ಅಭಿಮಾನಿಗಳಿಗೆ ಅಚ್ಚರಿ ಮೂಡಿಸಿದರು. ಹಸಿರು ಬಣ್ಣದ ಟೀ-ಶರ್ಟ್, ಮಾಸ್ಕ್ ಧರಿಸಿದ್ದ ವಿಜಯ್ ಸೈಕಲ್ನಲ್ಲಿ ಆಗಮಿಸಿ ಮತ ಚಲಾಯಿಸಿದರು. ಅವರು ಚೆನ್ನೈ ರಸ್ತೆಗಳಲ್ಲಿ ಸೈಕಲ್ ಸವಾರಿ ಮಾಡುತ್ತಿರುವ ದೃಶ್ಯಗಳು ವೈರಲ್ ಆಗಿವೆ. ಅಭಿಮಾನಿಗಳು ಅವರ ವೀಡಿಯೋ ತೆಗೆಯುತ್ತಿರುವುದೂ ಕಾಣಿಸುತ್ತದೆ.
ವಿಜಯ್ ಅವರೇಕೆ ಸೈಕಲ್ ತುಳಿದು ಮತದಾನ ಕೇಂದ್ರಕ್ಕೆ ಆಗಮಿಸಿದ್ದಾರೆಂಬ ಕುರಿತು ಹಲವಾರು ಊಹಾಪೋಹಗಳು ಹರಿದಾಡುತ್ತಿವೆ. ಡೀಸೆಲ್ ಮತ್ತು ಪೆಟ್ರೋಲ್ ಬೆಲೆಯೇರಿಕೆಯ ವಿರುದ್ಧ ಪ್ರತಿಭಟಿಸುವ ಸಲುವಾಗಿ ಅವರು ಹೀಗೆ ಮಾಡಿದ್ದಾರೆಂದು ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳು ಹೇಳುತ್ತಿದ್ದಾರೆ.
#Vijay arrives in cycle to cast his vote #TamilNaduElections pic.twitter.com/iKY4bkIqA8
— BARaju (@baraju_SuperHit) April 6, 2021
#ThalapathyVijay arrives in cycle to cast his vote in #TamilNaduElections #Thalapathy #Vijay @actorvijay pic.twitter.com/Y0MfcbNUSn
— Suresh Kondi (@V6_Suresh) April 6, 2021
#ThalapathyVijay Pedals His Way To Casts His Vote!!!!#TNElection #TNElections2021 #TNElection2021 #TNAssemblyElections2021 #tnelectionday #Election2021 #Elections2021 #Thalapathy #Vijay #thalapathyfansteam @actorvijay @Jagadishbliss @BussyAnand @V4umedia_ pic.twitter.com/3xDff5iJ6Z
— RIAZ K AHMED (@RIAZtheboss) April 6, 2021