ಮುಂಬೈನಲ್ಲಿ ಕೋವಿಡ್ ನಿರ್ಬಂಧ: ತವರೂರಿನತ್ತ ಮುಖ ಮಾಡಿದ ವಲಸಿಗ ಕಾರ್ಮಿಕರು

ಮುಂಬೈ:ವಾಣಿಜ್ಯ ನಗರಿ ಮುಂಬೈನಲ್ಲಿ ಕೋವಿಡ್-19 ಹರಡುವುದನ್ನು ತಡೆಯಲು ಕಠಿಣ ನಿರ್ಬಂಧ ವಿಧಿಸಲಾಗುತ್ತಿದ್ದು, ಹೊಟ್ಟೆಪಾಡಿಗೆ ಬಿಹಾರದಂತಹ ದೂರದ ರಾಜ್ಯಗಳಿಂದ ನಗರಕ್ಕೆ ಬಂದಿರುವ ವಲಸಿಗ ಕಾರ್ಮಿಕರು ಕೆಲಸವಿಲ್ಲದೆ ಮತ್ತೊಮ್ಮೆ ಮನೆಯತ್ತ ಹೊರಟು ನಿಂತಿದ್ದಾರೆ. 2020ರ ಪರಿಸ್ಥಿತಿ ಮತ್ತೆ ಪುನರಾವರ್ತನೆಯಾದಂತೆ ಕಂಡುಬಂದಿದೆ.
ನನಗೆ ಕೆಲವು ದಿನ ಸೇವಿಸಲು ಆಹಾರ ಸಿಗುತ್ತಿತ್ತು. ಇನ್ನು ಕೆಲವು ದಿನ ಊಟ ಸಿಗುತ್ತಿರಲಿಲ್ಲ. ಪರಿಸ್ಥಿತಿ ಮತ್ತೆ ಹದಗೆಡುತ್ತಿದೆ. ನಾನು ಆಫೀಸ್ ಬಾಯ್ ಆಗಿ ಕೆಲಸ ಮಾಡುತ್ತಿದ್ದ ಕಚೇರಿಯಲ್ಲಿ ಎಲ್ಲರೂ ಮನೆಯಿಂದಲೇ ಕೆಲಸ ಮಾಡುತ್ತಿರುವುದರಿಂದ ನಮಗೆ ಇಲ್ಲಿ ನೀವು ಅಗತ್ಯವಿಲ್ಲ ಎಂದು ಹೇಳಿದರು. ಆದರೆ ನಾವು ಮತ್ತೆ ಕಚೇರಿ ಪ್ರಾರಂಭಿಸಿದಾಗ ನಾವು ನಿಮಗೆ ಕರೆ ಮಾಡುತ್ತೇವೆ ಎಂದು ಅವರು ಹೇಳಿದ್ದಾರೆ. ನಾವು ಕೆಲವು ದಿನಗಳವರೆಗೆ ಕಾದಿದ್ದೇನೆ. ಬೇರೆ ಕೆಲಸವಿಲ್ಲದ ಕಾರಣ ನಾನು ಬಿಹಾರದಲ್ಲಿರುವ ನನ್ನ ತವರುಪಟ್ಟಣಕ್ಕೆ ಮರಳಲು ನಿರ್ಧರಿಸಿದೆ ”ಎಂದು ಬಲರಾಮ್ ಕುಮಾರ್ ಹೇಳಿದರು.
18 ವರ್ಷ ವಯಸ್ಸಿನ ಬಲರಾಮ್ ಬಿಹಾರದ ಮಧುಬನಿ ಮೂಲದವರು. ಬಲರಾಮ್ ಮತ್ತೆ ಕೆಲಸ ಹುಡುಕಿಕೊಂಡು ಮುಂಬೈಗೆ ಮರಳಿದ್ದರು. ಆದರೆ ಈಗ ಮತ್ತೆ ತನ್ನ ಸ್ವಂತ ರಾಜ್ಯಕ್ಕೆ ಹೋಗುವ ಹಾದಿಯಲ್ಲಿದ್ದಾರೆ.
“ಚರ್ಚ್‌ಗೇಟ್‌ನಲ್ಲಿ ಆಫೀಸ್ ಹುಡುಗನಾಗಿ ಕೆಲಸ ಮಾಡುತ್ತಿದ್ದೇನೆ, ನನಗೆ ತಿಂಗಳಿಗೆ 8,000 ರೂ. ಸಿಗುತ್ತಿದೆ ಆದರೆ ಈಗ ಮತ್ತೆ ಕೆಲಸವಿಲ್ಲದ ಕಾರಣ. ನಾನು ಮನೆಗೆ ಮರಳಬೇಕೆಂದು ನನ್ನ ಕುಟುಂಬ ಒತ್ತಾಯಿಸುತ್ತಿದೆ. ನೀನು ಅಲ್ಲಿಯೇ ಇದ್ದರೆ ಸಾಯುತ್ತೀಯಾ ಎಂದು ಮನೆಯವರು ಹೇಳಿದರು. ಹಾಗಾಗಿ ನಾನು ಹಿಂತಿರುಗುತ್ತಿದ್ದೇನೆ. ನನಗೆ ಕಚೇರಿಯಿಂದ ಕರೆ ಬಂದರೆ ನಾನು ಹಿಂದಿರುಗುತ್ತೇನೆ ”ಎಂದರು.
ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿರುವ ಕೊರೋನವೈರಸ್ ಪ್ರಕರಣಗಳು, ಹೆಚ್ಚುತ್ತಿರುವ ನಿರ್ಬಂಧಗಳು, 2020 ರ ನೆನಪುಗಳನ್ನು ಮರಳಿ ತರುತ್ತಿವೆ, ಸಾವಿರಾರು ವಲಸೆ ಕಾರ್ಮಿಕರು ಉತ್ತರ ಪ್ರದೇಶ, ಬಿಹಾರ, ಪಶ್ಚಿಮ ಬಂಗಾಳ ಮತ್ತು ಇತರ ರಾಜ್ಯಗಳಿಗೆ ಮರಳಲು ಹೆಣಗಾಡುತ್ತಿದ್ದಾರೆ.
ಸರೋಜ್ ಕುಮಾರ್ ಮತ್ತು ಅವರ ಐವರು ಸ್ನೇಹಿತರು ಮಧುಬನಿ ಮೂಲದವರು. ಐದು ವರ್ಷಗಳ ಹಿಂದೆ ಕೆಲಸ ಹುಡುಕಿಕೊಂಡು ಮುಂಬೈಗೆ ಬಂದಿದ್ದರು. ಐವರು ಖಾಸಗಿ ಚಾಲಕರಾಗಿ ಕೆಲಸ ಮಾಡುತ್ತಿದ್ದರೆ, ಒಬ್ಬರು ಆಫೀಸ್ ಹುಡುಗನಾಗಿ ಕೆಲಸ ಮಾಡುತ್ತಿದ್ದ. ಆದರೆ ಈಗ ಮನೆಗೆ ಮರಳಲು ನಿರ್ಧರಿಸಿದ್ದಾರೆ.
“ಮುಂಬೈನಲ್ಲಿ ಈಗ ಯಾವುದೇ ಕೆಲಸವಿಲ್ಲ. ಮತ್ತೊಮ್ಮೆ ದೊಡ್ಡ ಲಾಕ್‌ಡೌನ್ ಹೇರಬಹುದು ಎಂದು ಜನರು ಹೇಳುತ್ತಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ನನಗೆ ಕೆಲಸವಿಲ್ಲ. ಈ ಹಿಂದೆ ನಾನು ತಿಂಗಳಿಗೆ 10,000 ರೂಗಳನ್ನು ಸಂಪಾದಿಸುತ್ತಿದ್ದೆ. ಆದರೆ ಈಗ ನನ್ನ ಉದ್ಯೋಗದಾತ ಪರಿಸ್ಥಿತಿ ಉತ್ತಮಗೊಂಡ ನಂತರ ನನಗೆ ಕರೆ ಮಾಡುತ್ತೇನೆ ಎಂದು ಹೇಳುತ್ತಾರೆ. ಮನೆಗೆ ಹಿಂತಿರುಗಿ ಗೆದ್ದಯಲ್ಲಿ ಕೆಲಸ ಮಾಡಲು ಪ್ರಯತ್ನಿಸುತ್ತೇನೆ'' ಎಂದು ಸರೋಜ್ ಹೇಳಿದ್ದಾರೆ.







