ಎ.7ರ ಸಂಜೆ 7 ಕ್ಕೆ ‘ಪರೀಕ್ಷಾ ಪೆ ಚರ್ಚಾ’ ಪ್ರಧಾನಿಯೊಂದಿಗೆ ಸಂವಾದ ನಡೆಸುವ ಅನುಷಾ
ಉಡುಪಿ, ಎ.6: ದೇಶದ ಆಯ್ದ ವಿದ್ಯಾರ್ಥಿಗಳು, ಶಿಕ್ಷಕರು ಹಾಗೂ ಪೋಷಕರೊಂದಿಗೆ ಪ್ರಧಾನಮಂತ್ರಿ ನಡೆಸುವ ‘ಪರೀಕ್ಷಾ ಪೆ ಚರ್ಚಾ’ ನೇರ ಸಂವಾದ ಕಾರ್ಯಕ್ರಮ ಎ.7ರ ಸಂಜೆ 7 ಗಂಟೆಗೆ ನಡೆಯಲಿದೆ.
ರಾಷ್ಟ್ರಾದ್ಯಂತ ಟಿವಿ ಚಾನೆಲ್ ಹಾಗೂ ಡಿಜಿಟಲ್ ಮಾಧ್ಯಮಗಳ ಮೂಲಕ ಪ್ರಧಾನಿ ನಡೆಸುವ ಸಂವಾದ ವೀಡಿಯೋ ಕಾನ್ಫರೆನ್ಸ್ ಮೂಲಕ ನೇರ ಪ್ರಸಾರಗೊಳ್ಳಲಿದೆ. ಇದರಲ್ಲಿ ಉಡುಪಿ ಜಿಲ್ಲೆ ಕುಂದಾಪುರ ತಾಲೂಕು ಆಲ್ಬಾಡಿ ಆರ್ಡಿಯ ಚಾರ್ಮಕ್ಕಿ ನಾರಾಯಣ ಶೆಟ್ಟಿ ಸ್ಮಾರಕ ಸರಕಾರಿ ಪ್ರೌಢ ಶಾಲೆಯ ಎಸೆಸೆಲ್ಸಿ ವಿದ್ಯಾರ್ಥಿನಿ ಅನುಷಾ ಭಾಗವಹಿಸಲು ಆಯ್ಕೆಯಾಗಿದ್ದು, ಪ್ರಧಾನಿಯೊಂದಿಗೆ ಸಂವಾದ ನಡೆಸಲಿದ್ದಾಳೆ.
ವಿದ್ಯಾರ್ಥಿಗಳು, ಶಿಕ್ಷಕರು, ಪೋಷಕರು ಈ ಕಾರ್ಯಕ್ರಮವನ್ನು ಟಿವಿ ಚಾನೆಲ್‌ಗಳಲ್ಲಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ , -http:education.gov.in- ಯೂಟ್ಯೂಬ್ ಚಾನೆಲ್ -mygovindia -ನಲ್ಲಿ ವೀಕ್ಷಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
Next Story





