ಹೂಡೆ: ಬಡ ಕುಟುಂಬಕ್ಕೆ 18ನೆ ಮನೆ ಹಸ್ತಾಂತರ

ಉಡುಪಿ, ಎ.6: ಜಮಾಅತೆ ಇಸ್ಲಾಮಿ ಹಿಂದ್ ಹೂಡೆ ವತಿಯಿಂದ ಗುಳಿಬೆಟ್ಟುವಿನ ಬಡ ಕುಟುಂಬಕ್ಕೆ ನಿರ್ಮಿಸಿ ಕೊಟ್ಟ 18ನೇಯ ಮನೆಯನ್ನು ಸೋಮವಾರ ಹಸ್ತಾಂತರಿಸಲಾಯಿತು.
ಅಶೋಕ್ ಭಂಡಾರಿಗೆ ಮನೆಯ ಕೀಲಿಗೈ ಹಸ್ತಾಂತರವನ್ನು ಜಮಾಅತೆ ಇಸ್ಲಾಮಿ ಹಿಂದ್ ಮಹಿಳಾ ಘಟಕದ ಅಧ್ಯಕ್ಷೆ ಜಮೀಲಾ ಸದೀದಾ ನೆರವೇರಿಸಿದರು. ತೋನ್ಸೆ ಗ್ರಾಪಂ ವ್ಯಾಪ್ತಿಯಲ್ಲಿ ಸೂರಿಲ್ಲದವರನ್ನು ಗುರುತಿಸಿ ದಾನಿಗಳ ಸಹಾಯದಿಂದ ಮನೆ ನಿರ್ಮಿಸಿಕೊಡುವ ಸರಣಿಯ ಹದಿನೆಂಟನೇ ಮನೆ ಇದಾಗಿದೆ.
ತೋನ್ಸೆ ಗ್ರಾಪಂ ಉಪಾಧ್ಯಕ್ಷ ನಿತ್ಯಾನಂದ ಕೆಮ್ಮಣ್ಣು, ಪಿಡಿಓ ಕಮಲಾ, ವೇರೋನಿಕ ಕರ್ನೆಲಿಯೊ, ಪಂಚಾಯತ್ ಸದಸ್ಯರಾದ ಪ್ರಶಾಂತ್, ಸಂಧ್ಯಾ, ಮಾಜಿ ಪಂಚಾಯತ್ ಸದಸ್ಯೆ ಸರೋಜಾ, ಪಂಚಾಯತ್ ಕಾರ್ಯದರ್ಶಿ ದಿನಕರ ಬೆಂಗ್ರೆ, ರಾಮಪ್ಪಮೇಷ್ಟ್ರು ಶುಭಹಾರೈಸಿದರು.
ಜಮಾಅತೆ ಇಸ್ಲಾಮಿ ಹಿಂದ್ ಹೂಡೆಯ ಅಧ್ಯಕ್ಷ ಅಬ್ದುಲ್ ಕಾದೀರ್ ಮೊಯ್ದಿನ್ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಅಧ್ಯಕ್ಷೆ ಫೌಝಿಯಾ ಸಾದೀಕ್, ಇದ್ರಿಸ್ ಹೂಡೆ, ವಿಜಯ, ಸುಜಾನ್, ಪುರಂದರ, ಡಾ.ಫಹೀಮ್ ಉಪಸ್ಥಿತರಿದ್ದರು.
Next Story





