ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆಗೆ ಕೊರೋನ ದೃಢ

ಬೆಂಗಳೂರು, ಎ.6: ಕೊರೋನ ಸೋಂಕು ತಮಗೆ ದೃಢಪಟ್ಟಿದ್ದು, ನನ್ನ ಸಂಪರ್ಕದಲ್ಲಿ ಇದ್ದವರೂ ಆಸ್ಪತ್ರೆಗೆ ತೆರಳಿ ಟೆಸ್ಟ್ ಮಾಡಿಸಿಕೊಳ್ಳಬೇಕೆಂದು ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮಂಗಳವಾರ ಟ್ವೀಟ್ ಮಾಡಿರುವ ಖಂಡ್ರೆ ಅವರು, ಇಂದು ನನಗೆ ಸಣ್ಣ ಪ್ರಮಾಣದ ಜ್ವರ ಬಂದಿತ್ತು. ಹೀಗಾಗಿ, ಆಸ್ಪತ್ರೆಗೆ ತೆರಳಿದಾಗ ಕೊರೋನ ಇದೆ ಎಂದು ದೃಢಪಟ್ಟಿದೆ. ಹೀಗಾಗಿ, ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.
Next Story





