ಆಸ್ಪತ್ರೆಯ ರೋಗಿಗಳಿಗೆ ಕಳಪೆ ಆಹಾರ ಪೂರೈಸಿದ ಗುತ್ತಿಗೆದಾರನಿಗೆ ಕಪಾಳಮೋಕ್ಷ ಮಾಡಿದ ಸಚಿವ

ಅಕೋಲ: ಸರಕಾರಿ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ರೋಗಿಗಳಿಗೆ ಕಳಪೆ ಆಹಾರ ಪೂರೈಸುತ್ತಿದ್ದ ಗುತ್ತಿಗೆದಾರನಿಗೆ ಮಹಾರಾಷ್ಟ್ರದ ಸಚಿವ ಬಚ್ಚು ಕಾಡು ಕಪಾಳಮೋಕ್ಷ ಮಾಡಿರುವ ಘಟನೆ ವರದಿಯಾಗಿದೆ.
ಅಕೋಲ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ಕಾಡು ಸೋಮವಾರ ಸಂಜೆ ದೀಢೀರನೆ ಆಸ್ಪತ್ರಗೆ ಭೇಟಿ ನೀಡಿದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.
ಆಹಾರ ಪೂರೈಕೆ ಗುತ್ತಿಗೆದಾರನಿಗೆ ಸಚಿವ ಕಾಡು ಕಪಾಳಮೋಕ್ಷ ಮಾಡುತ್ತಿರುವ ವೀಡಿಯೊ ವೈರಲ್ ಆಗಿದೆ.
ಸಚಿವರು ಆಸ್ಪತ್ರೆಯ ಭೇಟಿಯ ವೇಳೆ, ಕೋವಿಡ್-19ನಿಂದ ಬಳಲುತ್ತಿರುವವರು ಸೇರಿದಂತೆ ರೋಗಿಗಳಿಗೆ ಪೂರೈಸುತ್ತಿರುವ ಆಹಾರವನ್ನು ಪರಿಶೀಲಿಸಿದರು. ಆಹಾರ ಪದಾರ್ಥಗಳು ಕಳಪೆ ಮಟ್ಟದ್ದಾಗಿದೆ ಎಂದು ತಿಳಿದಾಗ ಕೋಪಗೊಂಡರು.
ಊಟದ ಗುಣಮಟ್ಟ ಹಾಗೂ ಇತರ ವಿಷಯಗಳ ಬಗ್ಗೆ ವಿವರಣೆ ಪಡೆಯಲು ಸಚಿವರು ಆಹಾರ ಗುತ್ತಿಗೆದಾರರನ್ನು ಕರೆದರು. ಗುತ್ತಿಗೆದಾರ ತೃಪ್ತಿದಾಯಕ ಉತ್ತರಗಳನ್ನು ನೀಡದ ಕಾರಣ ಆತನಿಗೆ ಕಪಾಳಮೋಕ್ಷ ಮಾಡಿದರು.
ಆಸ್ಪತ್ರೆಯಲ್ಲಿ ರೋಗಿಗಳಿಗೆ ಕಳಪೆ ಆಹಾರ ಪೂರೈಕೆ ಮಾಡುತ್ತಿರುವ ಕುರಿತಾಗಿ ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು.
निकृष्ट जेवण पाहून बच्चू कडू भडकले, आचाऱ्याच्या थेट कानशिलात लगावलीhttps://t.co/Wu4ldW7jn6#baccukadi | @RealBacchuKadu
— TV9 Marathi (@TV9Marathi) April 6, 2021
राज्यमंत्री बच्चू कडू आचाऱ्यावर एवढं का भडकले?@RealBacchuKadu#BacchuKadu #Coronavirus #AkolaNews #AkolaMedicalCollege pic.twitter.com/1ajR6otz8h
— Mumbai Tak (@mumbaitak) April 6, 2021