ಕಸಬಾ ಬೆಂಗರೆ: ಮನೆಯಿಂದ ಕಳ್ಳತನ
ಮಂಗಳೂರು, ಎ.7: ಕಸಬಾ ಬೆಂಗರೆಯ ನಿವಾಸಿ ತಮ್ಸೀಲ್ ಎಂಬವರ ಮನೆಯ ಹೆಂಚು ತೆಗೆದು ಒಳ ನುಗ್ಗಿ ಕಪಾಟಿನಲ್ಲಿದ್ದ ನಗದು ಮತ್ತು ಬೆಳ್ಳಿಯ ಆಭರಣ ಕಳವು ಮಾಡಿರುವ ಬಗ್ಗೆ ಪಣಂಬೂರು ಪೊಲೀಸರಿಗೆ ದೂರು ನೀಡಲಾಗಿದೆ. ಅದರಂತೆ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಎ.3ರಂದು ಬೆಳಗ್ಗೆ 10 ಗಂಟೆಗೆ ತಮ್ಸೀಲ್ ಸಂಬಂಧಿಕರ ಮದುವೆ ಕಾರ್ಯಕ್ರಮಕ್ಕೆ ಕುಪ್ಪೆಪದವಿಗೆ ಮನೆಗೆ ಬೀಗ ಹಾಕಿ ಹೋದವರು 5ರಂದು ಬೆಳಗ್ಗೆ 10ಕ್ಕೆ ಮರಳಿ ಬಂದಿದ್ದರು. ಅಂದು ಸಂಜೆ 6ಗಂಟೆಗೆ ಬೆಡ್‌ರೂಮಿನಲ್ಲಿದ್ದ ಸ್ಟೀಲ್ ಕಪಾಟಿನ ಬಾಗಿಲು ತೆರೆದ ಸ್ಥಿತಿಯಲ್ಲಿದ್ದುದನ್ನು ಕಂಡು ಲಾಕರ್ ಪರಿಶೀಲಿಸಿದಾಗ ಅದರಲ್ಲಿದ್ದ 28 ಸಾವಿರ ರೂ ಮತ್ತು 6 ಸಾವಿರ ರೂ. ಮೌಲ್ಯದ 6 ಜೊತೆ ಬೆಳ್ಳಿಯ ಕಾಲ್ಗೆಜ್ಜೆ ಕಳವಾಗಿದೆ.
ತಮ್ಸೀಲ್ ಪೊಲೀಸರಿಗೆ ದೂರು ನೀಡಿದ್ದಾರೆ.
Next Story





