ಮಂಗಳೂರು : ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ನವೀಕೃತ ಮಳಿಗೆ ಉದ್ಘಾಟನೆ

ಮಂಗಳೂರು, ಎ.8: ನಗರದ ಫಳ್ನೀರ್ ಕರುಣಾ ಪ್ರೈಡ್ ಕಟ್ಟಡಕ್ಕೆ ಸ್ಥಳಾಂತರಗೊಂಡ ವಿಸ್ತೃತ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಳಿಗೆಯನ್ನು ಮಲಬಾರ್ ಸಮೂಹ ಸಂಸ್ಥೆಯ ಅಧ್ಯಕ್ಷ ಎಂ.ಪಿ. ಅಹ್ಮದ್ ವರ್ಚುವಲ್ ವೇದಿಕೆಯ ಮೂಲಕ ಗುರುವಾರ ಉದ್ಘಾಟಿಸಿದರು.
ಅವರು ಸಮಾರಂಭವನ್ನುದ್ದೇಶಿಸಿ ವರ್ಚುವಲ್ ವೇದಿಕೆಯ ಮೂಲಕ ಮಾತನಾಡುತ್ತಾ, 2006ರಲ್ಲಿ ನಗರದ ಫಳ್ನೀರ್ನಲ್ಲಿ ಆರಂಭಗೊಂಡ ಮಲಬಾರ್ ಚಿನ್ನ ಮತ್ತು ವಜ್ರಾಭರಣ ಮಳಿಗೆ ಕರ್ನಾಟಕ ರಾಜ್ಯದ ಪ್ರಮುಖ ಆಭರಣ ಮಳಿಗೆಯಾಗಿ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಮಲಬಾರ್ ಸಂಸ್ಥೆ ಇನ್ನಷ್ಟು ವಿಸ್ತಾರವಾದ ಮಳಿಗೆಯ ಮೂಲಕ ಗ್ರಾಹಕರಿಗೆ ಸೇವೆ ನೀಡಲು ಸಂತಸ ಪಡುತ್ತದೆ. ಸಂಪೂರ್ಣ ಪಾರದರ್ಶಕತೆ ಯೊಂದಿಗೆ ಜೀವನ ಪರ್ಯಂತ ಉಚಿತ ಮೇಯಿಂಟೆನೆನ್ಸ್, ಚಿನ್ನ ವಿನಿಮಯದಲ್ಲಿ ಶೂನ್ಯ ಕಡಿತ, ಶೇ 100 ಬಿಐಎಸ್ ಹಾಲ್ ಮಾರ್ಕ್ ಹೊಂದಿರುವ ಶುದ್ಧ ಚಿನ್ನ, ಪರೀಕ್ಷಿಸಲಾಗಿರುವ ಮತ್ತು ಪ್ರಮಾಣೀಕೃತ ವಜ್ರಾಭರಣಗಳು, ಬೈ ಬ್ಯಾಕ್ ಗ್ಯಾರಂಟಿ, ಸಂಸ್ಥೆಯ ಆಭರಣವು ಪೂರಕ ವಿಮಾ ಸೌಲಭ್ಯ ವನ್ನು ಒಳಗೊಂಡಿರುವುದು ಮಲಬಾರ್ ಆಭರಣ ಸಂಸ್ಥೆಯ ವಿಶೇಷತೆಯಾಗಿದೆ.
ಗ್ರಾಹಕರ ಜೊತೆ ಪಾರದರ್ಶಕ ವ್ಯವಹಾರ, ಗುಣಮಟ್ಟದ ಸೇವೆಯೊಂದಿಗೆ ಸುಸ್ಥಿರ ಮೌಲಯುತ ಉತ್ಪನ್ನಗಳನ್ನು ನೀಡುವುದರೊಂದಿಗೆ ಪಾರದರ್ಶಕ ವ್ಯವಹಾರಗಳನ್ನು ಸಂಸ್ಥೆ ನಡೆಸುತ್ತಾ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ. ಐ.ಟಿ, ಆರೋಗ್ಯ, ಶಿಕ್ಷಣ ಕ್ಷೇತ್ರದ ಕೇಂದ್ರವಾಗಿ ಬೆಳೆಯುತ್ತಿರುವ ಮಂಗಳೂರಿನಲ್ಲಿ ಮಲಬಾರ್ ಸಂಸ್ಥೆಗೆ ಗ್ರಾಹಕರಿಂದ ಉತ್ತಮ ಸಹಕಾರ ದೊರೆತಿದೆ. ಸಂಸ್ಥೆ ತನ್ನ ಸಾಮಾಜಿಕ ಹೊಣೆಗಾರಿಕೆಯ ನೆಲೆಯಲ್ಲಿ ಪ್ರತಿವರ್ಷ ಸಿಎಸ್ಆರ್ ನಿಧಿಯಿಂದ ಆರೋಗ್ಯ, ವಸತಿ ಹಾಗೂ ಶಿಕ್ಷಣಕ್ಕಾಗಿ ಗ್ರಾಹಕರಿಗೆ ಹಾಗೂ ಆರ್ಥಿಕವಾಗಿ ಹಿಂದುಳಿದವರಿಗೆ ನೆರವು ನೀಡುತ್ತಾ ಬಂದಿದೆ. ಮಲಬಾರ್ ಸಮೂಹ ಸಂಸ್ಥೆ ಗ್ರಾಹಕರಿಗೆ ಗರಿಷ್ಠ ತಂತ್ರಜ್ಞಾನದ ಬಳಕೆಯೊಂದಿಗೆ ಗುಣಮಟ್ಟದ ಸೇವೆ ನೀಡುತ್ತಿದೆ. ಇದೀಗ ಮಂಗಳೂರಿನಲ್ಲಿ ವಿಸ್ತೃತ ಮಳಿಗೆಯ ಮೂಲಕ ಗರಿಷ್ಠ ಆಭರಣಗಳ ವೈವಿಧ್ಯತೆಯೊಂದಿಗೆ ಗ್ರಾಹಕರಿಗೆ ಸೌಲಭ್ಯ ನೀಡಲು ಸಂಸ್ಥೆ ಸಿದ್ಧವಾಗಿದೆ ಎಂದು ಅವರು ತಿಳಿಸಿದರು.
ನಗರದಲ್ಲಿ ಅತ್ಯುತ್ತಮ ಚಿನ್ನ, ವಜ್ರಾಭರಣ ಸಂಗ್ರಹ ಹಾಗೂ ವಿಶೇಷ ಸೌಲಭ್ಯಗಳೊಂದಿಗೆ 2006ರಲ್ಲಿ ಆರಂಭಗೊಂಡ ಮಲಬಾರ್ ಆಭರಣ ಮಳಿಗೆ ಇದೀಗ ಸ್ಥಳಾಂತರಗೊಂಡು 12,012 ಚದರ ಅಡಿ ವಿಸ್ತೀರ್ಣದ ಎರಡು ಮಹಡಿಯ ಕಟ್ಟಡದಲ್ಲಿ ನಗರದ ಫಳ್ನೀರ್ ನಲ್ಲಿ ಗ್ರಾಹಕರ ಸೇವೆಗೆ ಪುನಾರಂಭಗೊಂಡಿದೆ ಎಂದು ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ವ್ಯವಸ್ಥಾಪಕ ನಿರ್ದೇಶಕ ಅಶ್ರಫ್ ತಿಳಿಸಿದ್ದಾರೆ.
ಸಮಾರಂಭದಲ್ಲಿ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಉಪಾಧ್ಯಕ್ಷ ಅಬ್ದುಲ್ ಸಲಾಂ ಶುಭ ಹಾರೈಸಿದರು. ಮಹಾರಾಷ್ಟ್ರ ವಿಭಾಗದ ಮುಖ್ಯಸ್ಥ ಝುಬೈರ್, ಕರ್ನಾಟಕ ವಿಭಾಗದ ಮುಖ್ಯಸ್ಥ ಫಿಲಸರ್ ಬಾಬು, ಕಟ್ಟಡದ ಮಾಲಕ ಕರುಣಾಕರನ್ ಹಾಗೂ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಮಂಗಳೂರು ಮಳೆಗೆಯ ವ್ಯವಸ್ಥಾಪಕರು, ಸಿಬ್ಬಂದಿಗಳು, ಗ್ರಾಹಕರು ಉಪಸ್ಥಿತರಿದ್ದರು.
ಪ್ರಥಮ ಗ್ರಾಹಕರಾದ ಲವೀಟಾ ಫೆರ್ನಾಂಡೀಸ್, ಯತಿಕಾ, ಪ್ರಥ್ವಿ, ಆಶಿಕಾ ಶೆಟ್ಟಿ ಅವರನ್ನು ಗುರುತಿಸಲಾಯಿತು. ಗ್ರಾಹಕರಾದ ಲವಿಟಾ, ಆಶಿಕಾ ಶೆಟ್ಟಿ, ಅಕ್ಷಯ ರೈ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿ, ಶುಭ ಹಾರೈಸಿದರು.




















