ಎ.10: ಮಂಗಳೂರು ವಿ.ವಿ. ಘಟಿಕೋತ್ಸವ

ಮಂಗಳೂರು : ಮಂಗಳೂರು ವಿಶ್ವವಿದ್ಯಾಲಯದ 39ನೇ ಘಟಿಕೋತ್ಸವ ಎ.10 ರಂದು ಮಂಗಳಗಂಗೊತ್ರಿ ಆವರಣದಲ್ಲಿ ನಡೆಯಲಿದೆ.
ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾ ಮೂರ್ತಿ ವರ್ಚುವಲ್ ವೇದಿಕೆ ಮೂಲಕ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಪ್ರೊ.ಪಿ. ಸುಬ್ರಹ್ಮಣ್ಯ ಯಡಪಡಿತ್ತಾಯ ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಈ ಬಾರಿ ಯಾರಿಗೂ ಗೌರವ ಡಾಕ್ಟರೇಟ್ ಹಾಗೂ ಡಿ.ಲಿಟ್ ಇಲ್ಲ. 117 ಮಂದಿಗೆ ಪಿಎಚ್.ಡಿ, 10 ಚಿನ್ನದ ಪದಕ, 101 ನಗದು ಬಹುಮಾನ, 188 ಮಂದಿ ರ್ಯಾಂಕ್ ಪಡೆಯಲಿದ್ದಾರೆ. ಈ ಬಾರಿ 43,743 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 33,806 ಮಂದಿ ಉತ್ತೀರ್ಣರಾಗಿದ್ದಾರೆ ಎಂದು ಪರೀಕ್ಷಾಂಗ ಕುಲಸಚಿವ ಪ್ರೊ.ಪಿ.ಎಲ್. ಧರ್ಮಾ ಹೇಳಿದರು.
ಕೋವಿಡ್ ಕಾರಣ ಸೀಮಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಹಾಜರಾಗುವರು. ಪಿಎಚ್.ಡಿ ಪಡೆದವರಲ್ಲಿ 14 ಮಂದಿ ವಿದೇಶಿ ವಿದ್ಯಾರ್ಥಿ ಗಳು ಎಂದರು. ಒಟ್ಟು 43,743 ವಿದ್ಯಾರ್ಥಿ ಗಳು ಪರೀಕ್ಷೆ ಗೆ ಹಾಜರಾಗಿದ್ದು 33.806 (77.289%) ವಿದ್ಯಾರ್ಥಿ ಗಳು ಉತ್ತೀರ್ಣರಾಗಿರುತ್ತಾರೆ. ಇದರಲ್ಲಿ ಸ್ನಾತಕೋತ್ತರ ಪದವಿ ಪರೀಕ್ಷೆಗೆ 6,657 ವಿದ್ಯಾರ್ಥಿಗಳು ಹಾಜರಾಗಿದ್ದು 6397 (96.09%) ವಿದ್ಯಾರ್ಥಿಗಳು ಉತ್ತೀರ್ಣರಾ ಗಿರುತ್ತಾರೆ. ಪದವಿ ಪರೀಕ್ಷೆಗೆ 36,940 ವಿದ್ಯಾರ್ಥಿಗಳು ಹಾಜರಾಗಿದ್ದು 27,263 (73.80%) ವಿದ್ಯಾರ್ಥಿಗಳು ಉತ್ತೀರ್ಣರಾ ಗಿರುತ್ತಾರೆ. ಉತ್ತೀರ್ಣರಾದ 33,806 ವಿದ್ಯಾರ್ಥಿ ಗಳಲ್ಲಿ 12,635 ಹುಡುಗರು (ಶೇ 68.65%) ಮತ್ತು 21,171 ಹುಡುಗಿಯರು. (83.55%) ಉತ್ತೀರ್ಣರಾ ಗಿದ್ದಾರೆ ಎಂದು ಪಿ. ಎಸ್.ಯಡಪಡಿತ್ತಾಯ ತಿಳಿಸಿದ್ದಾರೆ.
ಮುಂದಿನ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ ಹಿನ್ನಲೆಯ ಕಾರಣದಿಂದ ಶುಲ್ಕದಲ್ಲಿ ಯಾವು ದೇ ಹೆಚ್ಚಳ ಮಾಡುವುದಿಲ್ಲ ಎಂದು ಕುಲಪತಿ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಪ್ರಭಾರ ಕುಲಸಚಿವ ಪಿ.ಎಲ್. ಧರ್ಮ,ಹಣಕಾಸು ಸಚಿವ ನಾರಾಯಣ ,ಮಂಗಳೂರು ವಿ.ವಿ.ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಉಪಸ್ಥಿತರಿದ್ದರು.







