ವ್ಯಕ್ತಿ ನಾಪತ್ತೆ

ಉಡುಪಿ, ಎ.8: ನಗರದ ಲಕ್ಷ್ಮೀ ನಾರಾಯಣ ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿದ್ದ ರಮಾನಾಥ ನಾಯಕ್ (57) ಎಂಬವರು ಮಾ.24ರಿಂದ ನಾಪತ್ತೆಯಾಗಿದ್ದಾರೆ.
ಚಹರೆ: 5 ಅಡಿ 10 ಸೆಂ.ಮೀ. ಎತ್ತರವಿದ್ದು, ಸಾಧಾರಣ ಮೈಕಟ್ಟು, ಕೋಲುಮುಖ, ಗೋದಿ ಮೈಬಣ್ಣ ಹೊಂದಿದ್ದು, ಕನ್ನಡ, ಕೊಂಕಣಿ, ತುಳು ಭಾಷೆ ಮಾತನಾಡುತ್ತಾರೆ. ಇವರ ಬಗ್ಗೆ ಮಾಹಿತಿ ದೊರೆತಲ್ಲಿ ಉಡುಪಿ ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ನಗರ ಪೊಲೀಸ್ ಠಾಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story





