Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. ಮುಷ್ಕರ ಮುಂದುವರಿಸಿದ ಸಾರಿಗೆ ನೌಕರರು:...

ಮುಷ್ಕರ ಮುಂದುವರಿಸಿದ ಸಾರಿಗೆ ನೌಕರರು: ಪ್ರಯಾಣಿಕರ ಜೇಬಿಗೆ ಕತ್ತರಿ !

ಖಾಸಗಿ ಬಸ್‍ಗಳಿಗೆ ದರ ನಿಗದಿ ಮಾಡಿದ ಸಾರಿಗೆ ಇಲಾಖೆ

ವಾರ್ತಾಭಾರತಿವಾರ್ತಾಭಾರತಿ8 April 2021 8:55 PM IST
share
ಮುಷ್ಕರ ಮುಂದುವರಿಸಿದ ಸಾರಿಗೆ ನೌಕರರು: ಪ್ರಯಾಣಿಕರ ಜೇಬಿಗೆ ಕತ್ತರಿ !

ಬೆಂಗಳೂರು, ಎ.8: ಸಾರಿಗೆ ನೌಕರರ ಮುಷ್ಕರ ಸಂಬಂಧ ರಾಜ್ಯ ಸರಕಾರ ಮಾತುಕತೆಗೆ ಮುಂದಾಗದ ಹಿನ್ನೆಲೆ ನೌಕರರು ತಮ್ಮ ಹೋರಾಟ ಇಂದು ದಿನವೂ ಮುಂದುವರಿಸಿದರು. ರಾಜ್ಯದೆಲ್ಲೆಡೆ ಪ್ರಯಾಣಿಕರು ಸೂಕ್ತ ರೀತಿಯ ಸಾರಿಗೆ ಸೌಲಭ್ಯವಿಲ್ಲದೆ ಗುರುವಾರವೂ ತೊಂದರೆ ಅನುಭವಿಸಿದರೆ, ಮತ್ತೊಂದೆಡೆ ಖಾಸಗಿ ವಾಹನಗಳಲ್ಲಿ ತೆರಳಲು ದುಪ್ಪಟ್ಟು ಖರ್ಚು ಮಾಡಿದರು.

ಗುರುವಾರ ದಿನಪೂರ್ತಿ ಬೆಂಗಳೂರಿನಲ್ಲಿ ಬಿಎಂಟಿಸಿ, ಕೆಎಸ್ಸಾರ್ಟಿಸಿ ಸೇರಿದಂತೆ ನಾಲ್ಕು ವಿಭಾಗಗಳ ಬಸ್ಸುಗಳು ರಸ್ತೆಗಿಳಿಯಲಿಲ್ಲ. ಇಲ್ಲಿನ ಮೆಜೆಸ್ಟಿಕ್, ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ, ಕೆಆರ್ ಮಾರುಕಟ್ಟೆ ಸೇರಿದಂತೆ ಸದಾ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್‍ಗಳಿಂದ ತುಂಬಿರುತ್ತಿದ್ದ ಬಸ್ ನಿಲ್ದಾಣವು ಬಿಕೋ ಎನ್ನುತ್ತಿತ್ತು. ಆದರೆ ಈ ಜಾಗವನ್ನು ಖಾಸಗಿ ಬಸ್‍ಗಳು ಆಕ್ರಮಿಸಿದ್ದವು.

ರಾಜ್ಯದೆಲ್ಲೆಡೆ ಖಾಸಗಿ ಬಸ್‍ಗಳನ್ನು ಸಾರ್ವಜನಿಕರು ಅವಲಂಬಿಸಬೇಕಾದ ಪರಿಸ್ಥಿತಿ ಕಳೆದ ಎರಡು ದಿನಗಳಿಂದ ನಿರ್ಮಾಣವಾಗಿದೆ. ಟೆಂಪೋಗಳು, ಮಿನಿ ಬಸ್‍ಗಳ ಓಡಾಟ ಹೆಚ್ಚಾಗಿತ್ತು. ದಿನನಿತ್ಯ ಕೆಲಸ ಕಾರ್ಯಗಳಿಗೆ ಬಸ್‍ಗಳನ್ನೇ ನಂಬಿದ್ದ ಪ್ರಯಾಣಿಕರು ಪರದಾಡಿದರು.

ದುಬಾರಿ ದರ: ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ವಿವಿಧ ಸ್ಥಳಗಳಿಗೆ ಪ್ರಯಾಣಿಕರನ್ನು ಕರೆದೊಯ್ಯಲು ನಿಂತಿದ್ದ ಮ್ಯಾಕ್ಸಿಕ್ಯಾಬ್‍ಗಳಲ್ಲಿ ಬಸ್‍ಗಳ ದರಕ್ಕಿಂತ ದುಪ್ಪಟ್ಟು ದರವನ್ನು ಪ್ರಯಾಣಿಕರಿಂದ ವಸೂಲಿ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ಬಹುತೇಕ ಕಡೆಗಳಲ್ಲಿ ತೆರಳಲು ಎರಡು ಮೂರು ಪಟ್ಟು ದರವನ್ನು ಕೊಟ್ಟು ಪ್ರಯಾಣಿಕರು ಅನಿವಾರ್ಯವಾಗಿ ಪ್ರಯಾಣಿಸಿದರು.

ದರ ನಿಗದಿ

ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರರದ ಹಿನ್ನೆಲೆ ಖಾಸಗಿ ಬಸ್ ಮಾಲಕರ ಜೊತೆ ಸಾರಿಗೆ ಇಲಾಖೆ ಸಭೆ ನಡೆಸಿದ್ದು, ದರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಚರ್ಚೆ ಮಾಡಲಾಗಿದೆ.

ಸರಕಾರಿ ಬಸ್‍ಗಳ ಮಾದರಿಯಲ್ಲಿ ದರ ನಿಗದಿ ಮಾಡಿದ್ದು, ಬೆಂಗಳೂರಿನಿಂದ ವಿವಿಧ ಜಿಲ್ಲಾ ಕೇಂದ್ರಗಳಿಗೆ ತೆರಳುವ ಬಸ್‍ಗಳಿಗೆ ದರ ನಿಗದಿ ಮಾಡಲಾಗಿದೆ.

ದರ ನಿಗದಿ ಪಟ್ಟಿ ಹೀಗಿದೆ

* ಬೆಂಗಳೂರು-ಹಾಸನ-209 ರೂ/-

* ಬೆಂಗಳೂರು-ಚಿಕ್ಕಮಗಳೂರು-280 ರೂ/-

* ಬೆಂಗಳೂರು-ಶಿವಮೊಗ್ಗ- 298 ರೂ/-

* ಬೆಂಗಳೂರು-ದಾವಣಗೆರೆ -312 ರೂ/-

* ಬೆಂಗಳೂರು-ಚಿತ್ರದುರ್ಗ 237 ರೂ/-

* ಬೆಂಗಳೂರು-ಹೊಸದುರ್ಗ 173 ರೂ/-

* ಬೆಂಗಳೂರು-ಪಾವಗಡ 164 ರೂ/-

* ಬೆಂಗಳೂರು - ಮಧುಗಿರಿ 111 ರೂ/-

* ಬೆಂಗಳೂರು - ಕೊರಟಗೆರೆ 96 ರೂ/-

* ಬೆಂಗಳೂರು-ಗೌರಿಬಿದನೂರ 88 ರೂ/-

* ಬೆಂಗಳೂರು-ಚಿಕ್ಕಬಳ್ಳಾಪುರ 69 ರೂ/-

* ಬೆಂಗಳೂರು-ಬಾಗೆಪಲ್ಲಿ 117 ರೂ/-

* ಬೆಂಗಳೂರು-ಕೋಲಾರ 76 ರೂ/-

* ಬೆಂಗಳೂರು-ಮುಳಬಾಗಿಲು 105 ರೂ/-

* ಬೆಂಗಳೂರು-ಚಿಂತಾಮಣಿ 86 ರೂ/-

* ಬೆಂಗಳೂರು-ತುಮಕೂರು 80 ರೂ/-

* ಬೆಂಗಳೂರು-ಕೆಜಿಎಫ್ 110 ರೂ/-

* ಬೆಂಗಳೂರು-ಚಳ್ಳಕೆರೆ 230 ರೂ/-

* ಬೆಂಗಳೂರು-ಬಳ್ಳಾರಿ 360 ರೂ/-

* ಬೆಂಗಳೂರು-ಸಿರಾ 145 ರೂ/-

* ಬೆಂಗಳೂರು-ಹಿರಿಯೂರು 195 ರೂ/-

* ಬೆಂಗಳೂರು-ಧರ್ಮಸ್ಥಳ 343 ರೂ/-

* ಬೆಂಗಳೂರು-ಉಡುಪಿ 470ರೂ/-

* ಬೆಂಗಳೂರು-ಕುಂದಾಪುರ 519 ರೂ/-

* ಬೆಂಗಳೂರು- ಪುತ್ತೂರು 470 ರೂ/-

* ಬೆಂಗಳೂರು-ಮಡಿಕೇರಿ 326 ರೂ/-

* ಬೆಂಗಳೂರು-ಬಿಜಾಪುರ 678 ರೂ/-

* ಬೆಂಗಳೂರು-ಮಂಗಳೂರು 401 ರೂ/-

* ಬೆಂಗಳೂರು-ಕೊಪ್ಪಳ 462 ರೂ/-

* ಬೆಂಗಳೂರು-ಹೊಸಪೇಟೆ 399 ರೂ/-

* ಬೆಂಗಳೂರು-ಕಲಬುರಗಿ 691 ರೂ/-

* ಬೆಂಗಳೂರು-ಹುಬ್ಬಳ್ಳಿ 489 ರೂ/-

ನಿವೃತ್ತರಿಗೆ ಅವಕಾಶ

ನಿವೃತ್ತ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ಒಪ್ಪಂದದ ಆಧಾರದ ಮೇಲೆ ನಿಯೋಜನೆಗೊಳಿಸಿಕೊಂಡು, ಸಾರಿಗೆ ಬಸ್ ಸಂಚಾರಕ್ಕೆ ಅಧಿಸೂಚನೆ ಹೊರಡಿಸಿದೆ.

ಈ ಕುರಿತಂತೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಸಿ. ಕಳಸದ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸಿ, ಕಳೆದ 2 ವರ್ಷಗಳಲ್ಲಿ ನಿವೃತ್ತಿ ಹೊಂದಿ 62 ವರ್ಷ ವಯೋಮಿತಿ ಮೀರದ ಚಾಲಕ ಹಾಗೂ ನಿರ್ವಾಹಕರನ್ನು ತಾತ್ಕಾಲಿಕವಾಗಿ ನಿಗಮದಲ್ಲಿ ಒಪ್ಪಂದದ ಆಧಾರದ ಮೇಲೆ ನಿಯೋಜಿಸಲು ಉದ್ದೇಶಿಸಲಾಗಿದೆ. ನಿವೃತ್ತ ನೌಕರರನ್ನು ಅವರು ನಿವೃತ್ತಿ ಹೊಂದಿದ ವಿಭಾಗದ ಅಥವಾ ವಾಸಸ್ಥಳಕ್ಕೆ ಹತ್ತಿರದ ವಿಭಾಗಗಳಲ್ಲಿ ನಿಯೋಜಿಸಲಾಗುವುದು. ಇನ್ನು, 2 ವರ್ಷ ಮೀರದ ನಿವೃತ್ತ ಸಿಬ್ಬಂದಿಗೆ ಬಸ್‍ಗಳನ್ನ ಚಲಾಯಿಸಲು ಆಹ್ವಾನ ನೀಡಲಾಗಿದ್ದು, ಚಾಲಕರಿಗೆ 800 ರೂ, ನಿರ್ವಾಹಕರಿಗೆ 700 ರೂ ಗೌರವಧನ ನಿಗದಿ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

ನೌಕರರಿಗೆ ನೋಟಿಸ್ ಬಿಸಿ

ಸಾರಿಗೆ ನೌಕರರು ನಡೆಸುತ್ತಿರುವ ಮುಷ್ಕರಕ್ಕೆ ಈಗ ನೋಟಿಸ್ ಬಿಸಿ ತಟ್ಟಿದೆ. ಕರ್ತವ್ಯಕ್ಕೆ ಹಾಜರಾಗದ ಸಿಬ್ಬಂದಿ ಇಲಾಖೆಯ ವಸತಿ ಗೃಹಗಳ ತೆರವು ಮಾಡಬೇಕೆಂದು ವಿಜಯಪುರ, ಹುಬ್ಬಳ್ಳಿ ಸೇರಿದಂತೆ ವಿವಿಧ ಕಡೆಗಳಲ್ಲಿ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.

ಇಲಾಖೆಯ ಭದ್ರತಾ ಸಿಬ್ಬಂದಿ ಖುದ್ದು ನೌಕರರ ಮನೆಗೆ ಹೋಗಿ ನೋಟಿಸ್ ಕೊಟ್ಟು ಬರುತ್ತಿದ್ದಾರೆ. ಸಾರಿಗೆ ಸಂಸ್ಥೆಯ ಸೇವೆ ಅವಶ್ಯಕವಾಗಿರುವುದರಿಂದ ನೀವು ತುರ್ತು ಸಂದರ್ಭದಲ್ಲಿ ಕರ್ತವ್ಯಕ್ಕೆ ಲಭ್ಯರಾಗಬೇಕು ಎನ್ನುವುದು ಸಂಸ್ಥೆಯ ಸೂಚನೆ. ಕರ್ತವ್ಯಕ್ಕೆ ಬರಬೇಕು ಎಂದು ದೂರವಾಣಿ ಮೂಲಕ ಹಲವಾರು ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಮನೆಗೆ ಬಂದು ಕೋರಿದರೂ ನಿಯಮ ಉಲ್ಲಂಘಿಸಿದ್ದೀರಿ ಎಂದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧಿಕಾರಿಗಳು ನೋಟಿಸ್‍ನಲ್ಲಿ ತಿಳಿಸಿದ್ದಾರೆ.

‘6ನೇ ವೇತನ ಆಯೋಗ ಶಿಫಾರಸ್ಸು ಸಾಧ್ಯವಿಲ್ಲ'

ಯಾವುದೇ ಕಾರಣಕ್ಕೂ ಆರನೇ ವೇತನ ಆಯೋಗದ ಶಿಫಾರಸ್ಸು ಸಾಧ್ಯವಿಲ್ಲ. ಪ್ರತಿಭಟನೆ ಮಾಡುತ್ತಿರುವ ಮತ್ತು ಪ್ರಚೋದನೆ ನೀಡುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ಅನಿವಾರ್ಯ ಅನಿಸಿದರೆ ಎಸ್ಮಾ ಜಾರಿ ಮಾಡಬೇಕಾಗುತ್ತದೆ. ಇನ್ನು ವಿಜಯಪುರ ಮತ್ತು ಚಾಮರಾಜನಗರದಲ್ಲಿ ನೌಕರರ ವಸತಿ ಮನೆಗಳನ್ನು ಖಾಲಿ ಮಾಡುವಂತೆ ನೊಟೀಸ್ ನೀಡಲಾಗಿತ್ತು. ಅದನ್ನು ತಡೆಹಿಡಿದಿದ್ದೇವೆ. ಯಾರನ್ನೂ ಮನೆ ಖಾಲಿ ಮಾಡಿಸಿಲ್ಲ.

-ಅಂಜುಂ ಪರ್ವೇಝ್, ಸಾರಿಗೆ ಇಲಾಖೆ ಪ್ರಧಾನ ಕಾರ್ಯದರ್ಶಿ

share
ವಾರ್ತಾಭಾರತಿ
ವಾರ್ತಾಭಾರತಿ
Next Story
X