‘ಕ್ಯಾಲ್ಕುಲಸ್ ಆ್ಯಂಡ್ ಲೀನಿಯರ್ ಆಲ್ಜಿಬ್ರಾ’ ಪುಸ್ತಕ ಬಿಡುಗಡೆ

ಉಡುಪಿ, ಎ.8: ಉಡುಪಿ ಸಂಸ್ಕೃತ ಸ್ನಾತಕ ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ವತಿಯಿಂದ ಭಾಗ್ಯಲಕ್ಷ್ಮೀ ಅಡಿಗ ಬರೆದ ಗಣಿತ ಶಾಸ್ತ್ರಕ್ಕೆ ಸಂಬಂಧಿತ, ಕ್ಯಾಲ್ಕುಲಸ್ ಆ್ಯಂಡ್ ಲೀನಿಯರ್ ಆಲ್ಜಿಬ್ರಾ ಪುಸ್ತಕ ಬಿಡುಗಡೆ ಕಾರ್ಯಕ್ರಮವು ಕಾಲೇಜಿನ ಭೀಮ ಸಭಾಂಗಣದಲ್ಲಿ ಗುರುವಾರ ಜರಗಿತು.
ಪುಸ್ತಕವನ್ನು ಎಸ್.ಎಮ್.ಎಸ್.ಪಿ ಸಭಾದ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ ಬಿಡುಗಡೆಗೊಳಿಸಿದರು. ಲೇಖಕಿ ಭಾಗ್ಯಲಕ್ಷ್ಮಿ ಅಡಿಗ ಮಾತನಾಡಿದರು. ಅಧ್ಯಕ್ಷತೆಯನ್ನು ಸಂಸ್ಕೃತ ಕಾಲೇಜಿನ ಪ್ರಾಂಶುಪಾಲ ಪ್ರೋ ಎ್.ಲಕ್ಷ್ಮೀ ನಾರಾಯಣ ಭಟ್ ವಹಿಸಿದ್ದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಉಪಸ್ಥಿತರಿದ್ದರು. ಗ್ರಂಥಪಾಲಕ ಹರಿಕೃಷ್ಣ ರಾವ್ ಸಗ್ರಿ ಸ್ವಾಗತಿಸಿದರು. ವಿನಯ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಚಿನ್ಮಯ್ ಭಟ್ ವಂದಿಸಿದರು.
Next Story





