ಭಟ್ಕಳ : ಅಂಜುಮನ್ ಮಹಾವಿದ್ಯಾಲಯಕ್ಕೆ ಶೇ.100 ಫಲಿತಾಂಶ

ಭಟ್ಕಳ : ಇಲ್ಲಿನ ಪ್ರತಿಷ್ಠಿತ ಅಂಜುಮನ್ ಹಾಮಿ-ಎ- ಮುಸ್ಲಿಮೀನ್ ಶಿಕ್ಷಣ ಸಂಸ್ಥೆಯ ಅಂಜುಮನ್ ಶಿಕ್ಷಣ ಮಹಾವಿದ್ಯಾಲಯಕ್ಕೆ 2020ನೆ ಸಾಲಿನ ಪ್ರಥಮ ಹಾಗೂ ತೃತೀಯಾ ಸೆಮಿಸ್ಟರ್ ಪರೀಕ್ಷೆಯಲ್ಲಿ ಶೇ.100 ಫಲಿತಾಂಶ ದಾಖಲಿಸಿದ್ದು ಎಲ್ಲ ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಗೊಂಡಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
ಪ್ರಥಮ ಸೆಮಿಸ್ಟರ್ ಪರೀಕ್ಷೆಯಲ್ಲಿ 35 ವಿದ್ಯಾರ್ಥಿಗಳು ಹಾಜರಾಗಿದ್ದು ಎಲ್ಲರೂ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡಿದ್ದಾರೆ. ಶೇ.95.15 ಅಂಕ ಗಳೊಂದಿಗೆ ವಿನಯಶ್ರೀ, ನೂರ್-ಎ-ರೇನಾ ಹಾಗು ಫೌಝಿಯಾ ಪರ್ವಿನ್ ಅಗ್ರಾಂಕವನ್ನು ಗಳಿಸಿದ್ದಾರೆ.
ತೃತೀಯ ಸೆಮಿಸ್ಟರ್ ಪರೀಕ್ಷೆಯಲ್ಲಿ ಹಾಜರಾದ 45 ವಿದ್ಯಾರ್ಥಿಗಳಲ್ಲಿ ಎಲ್ಲರೂ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದು, ತಹಿಯಾ ತಸ್ಕೀನ್ ಅಬ್ದುಲ್ಲಾ ಶೇಖ್ ಶೇ 91.50, ಶ್ವೇತಾ ಗಂಗಾಧರ್ ನಾಯ್ಕ 91.17%, ನಿವೇದಿತಾ ಅಶೋಕ್ ಭೋಮ್ಕರ್ ಮತ್ತು ಇಸ್ರಾ ಇಸ್ಹಾಖ್ ಶಾಬಂದ್ರ 90.83%, ಅಶ್ವಿನಿ ಶನಿಯಾರ್ ನಾಯ್ಕ ಮತ್ತು ಆಯಿಶಾ ಸಬಾ 90.5%, ಪದ್ಮಾ ಗೌಡ ಶೇ.90% ಅಂಕಗಳನ್ನು ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಅಂಜುಮಾನ್ ಹಾಮಿ-ಎ-ಮುಸ್ಲೀಮೀನ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಶಿಕ್ಷಣ ಮಹಾ ವಿದ್ಯಾಲಯದ ಪ್ರಾಂಶುಪಾಲರು ಸಿಬ್ಬಂದಿ ವರ್ಗ ಅಭಿನಂದಿಸಿದೆ.







