Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ವಾರ್ತಾಭಾರತಿ ವಿಶೇಷ
  3. ಆರೋಗ್ಯ
  4. ಆ್ಯಂಟಿಬಯಾಟಿಕ್‌ಗಳನ್ನು ಅತಿಯಾಗಿ...

ಆ್ಯಂಟಿಬಯಾಟಿಕ್‌ಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಗೊತ್ತೇ?

ವಾರ್ತಾಭಾರತಿವಾರ್ತಾಭಾರತಿ8 April 2021 11:47 PM IST
share
ಆ್ಯಂಟಿಬಯಾಟಿಕ್‌ಗಳನ್ನು ಅತಿಯಾಗಿ ಸೇವಿಸಿದರೆ ಏನಾಗುತ್ತದೆ ಗೊತ್ತೇ?

ಆ್ಯಂಟಿಬಯಾಟಿಕ್‌ಗಳು ಸುರಕ್ಷಿತ ಔಷಧಿಗಳಾಗಿದ್ದು, ವಿವಿಧ ಕಾಯಿಲೆಗಳ ಚಿಕಿತ್ಸೆಯಲ್ಲಿ ಇವುಗಳನ್ನು ವೈದ್ಯರು ಶಿಫಾರಸು ಮಾಡುತ್ತಾರೆ. ಕೆಲವೊಮ್ಮೆ ಆ್ಯಂಟಿಬಯಾಟಿಕ್‌ಗಳು ಅಪಾಯಕಾರಿಯೂ ಆಗಬಹುದು. ವೈದ್ಯರು ಪ್ರಮುಖವಾಗಿ ಬ್ಯಾಕ್ಟೀರಿಯಾ ಸೋಂಕುಗಳಿಗೆ ಚಿಕಿತ್ಸೆ ನೀಡಲು ಆ್ಯಂಟಿಬಯಾಟಿಕ್‌ಗಳನ್ನು ಬಳಸುತ್ತಾರೆ ಮತ್ತು ಇವು ಅಡ್ಡಪರಿಣಾಮಗಳನ್ನುಂಟು ಮಾಡುವುದು ಅಪರೂಪ. ಆ್ಯಂಟಿಬಯಾಟಿಕ್ ಗಳೊಂದಿಗೆ ಗುರುತಿಸಿಕೊಂಡಿರುವ ಹೆಚ್ಚಿನ ಅಡ್ಡಪರಿಣಾಮಗಳು ಮಾರಣಾಂತಿಕವೇನಲ್ಲ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಆ್ಯಂಟಿಬಯಾಟಿಕ್‌ಗಳು ಅನಾಫಿಲಾಕ್ಸಿಸ್ ಅಥವಾ ಅತಿಸಂವೇದನೆಶೀಲತೆಯಂತಹ ಗಂಭೀರ ಅಡ್ಡಪರಿಣಾಮಗಳಿಗೆ ಕಾರಣವಾಗಬಹುದು. ಎಲ್ಲ ಸೋಂಕುಗಳಿಗೂ ಆ್ಯಂಟಿಬಯಾಟಿಕ್‌ಗಳ ಮೂಲಕ ಚಿಕಿತ್ಸೆಯನ್ನು ನೀಡಲಾಗುವುದಿಲ್ಲ. ಬ್ಯಾಕ್ಟೀರಿಯಾಗಳಿಂದ ಉಂಟಾಗುವ ಸೋಂಕಿನ ವಿರುದ್ಧ ಹೋರಾಡುವಲ್ಲಿ ಆ್ಯಂಟಿಬಯಾಟಿಕ್‌ಗಳು ಅತ್ಯಂತ ಪರಿಣಾಮಕಾರಿಯಾಗಿವೆಯಾದರೂ ಅವು ವೈರಸ್‌ಗಳ ವಿರುದ್ಧ ಕೆಲಸ ಮಾಡುವುದಿಲ್ಲ.

ಇತರ ಎಲ್ಲ ಔಷಧಿಗಳಂತೆ ಆ್ಯಂಟಿಬಯಾಟಿಕ್‌ಗಳೂ ಅಡ್ಡಪರಿಣಾಮಗಳನ್ನುಂಟು ಮಾಡಬಲ್ಲವು,ಹೀಗಾಗಿ ಅಗತ್ಯವಿದ್ದಾಗ ಮಾತ್ರ ಅವುಗಳನ್ನು ಸೇವಿಸಬೇಕು. ಅಗತ್ಯವಿಲ್ಲದ ಸಮಯದಲ್ಲಿ ಆ್ಯಂಟಿಬಯಾಟಿಕ್‌ಗಳನ್ನು ಸೇವಿಸುವುದೂ ಹಾನಿಕಾರಕವಾಗಬಲ್ಲದು. ಹೀಗಾಗಿ ಆ್ಯಂಟಿಬಯಾಟಿಕ್‌ಗಳ ಕುರಿತು ನಮಗೆ ಗೊತ್ತಿರಬೇಕಾದ ಪ್ರಮುಖ ವಿಷಯಗಳಿವೆ. ಆ್ಯಂಟಿಬಯಾಟಿಕ್‌ಗಳು ಸೇವನೆಯ ಬಳಿಕ ಅಹಿತಕರ ಅನುಭವಗಳನ್ನುಂಟು ಮಾಡಿದರೆ ವೈದ್ಯರ ಸಲಹೆ ಪಡೆಯಬೇಕು. ಅಡ್ಡಪರಿಣಾಮಗಳು ತೀವ್ರವಾಗಿದ್ದರೆ ಅಥವಾ ಉಸಿರಾಟಕ್ಕೆ ತೊಂದರೆಯಾಗುತ್ತಿದ್ದರೆ ಆ್ಯಂಟಿಬಯಾಟಿಕ್‌ಗಳ ಸೇವನೆಯನ್ನು ತಕ್ಷಣ ನಿಲ್ಲಿಸಬೇಕು ಹಾಗೂ ವೈದ್ಯರನ್ನು ಸಂಪರ್ಕಿಸಬೇಕು.

ಆ್ಯಂಟಿಬಯಾಟಿಕ್‌ಗಳ ಕೆಲವು ಅಡ್ಡಪರಿಣಾಮಗಳ ಕುರಿತು ಮಾಹಿತಿಗಳಿಲ್ಲಿವೆ:

* ವಾಂತಿ

ಜೀರ್ಣಸಂಬಂಧಿ ಸಮಸ್ಯೆ ಆ್ಯಂಟಿಬಯಾಟಿಕ್‌ಗಳ ಅತ್ಯಂತ ಸಾಮಾನ್ಯ ಅಡ್ಡಪರಿಣಾಮವಾಗಿದೆ. ಆ್ಯಂಟಿಬಯಾಟಿಕ್‌ಗಳನ್ನು ಸೇವಿಸಿದ 30 ನಿಮಿಷಗಳ ಬಳಿಕ ಅಸ್ವಸ್ಥತೆ ಅಥವಾ ವಾಂತಿಯುಂಟಾದರೆ ನೀವು ಇನ್ನೊಂದು ಡೋಸ್‌ನ್ನು ಸೇವಿಸಬಾರದು ಮತ್ತು ತಕ್ಷಣವೇ ವೈದ್ಯರನ್ನು ಸಂಪರ್ಕಿಸಬೇಕು. ವಾಂತಿ ಕೆಲ ಸಮಯದಲ್ಲಿ ನಿಲ್ಲುತ್ತದೆ,ಆದರೆ ಅದು ದೀರ್ಘಕಾಲ ಮುಂದುವರಿದರೆ ವೈದ್ಯರ ಗಮನಕ್ಕೆ ತರಬೇಕು.

* ಭೇದಿ

 ಬ್ಯಾಕ್ಟೀರಿಯಾ ಸೋಂಕುಗಳಿಗೆ ಚಿಕಿತ್ಸೆಯಾಗಿ ಆ್ಯಂಟಿಬಯಾಟಿಕ್‌ಗಳನ್ನು ಸೇವಿಸಿದಾಗ ಅತಿಸಾರವೂ ಕಾಣಿಸಿಕೊಳ್ಳಬಹುದು. ಆದರೆ ಆ್ಯಂಟಿಬಯಾಟಿಕ್‌ಗಳ ಸೇವನೆಯಿಂದ ಉಂಟಾಗುವ ಭೇದಿಯು ಸೌಮ್ಯಸ್ವರೂಪದ್ದಾಗಿದ್ದು ಯಾವುದೇ ಚಿಕಿತ್ಸೆ ಅಗತ್ಯವಾಗುವುದಿಲ್ಲ. ಅದು ಹೆಚ್ಚೆಂದರೆ ಒಂದೆರಡು ದಿನ ಬಾಧಿಸಬಹುದು ಮತ್ತು ಇದಕ್ಕೆ ಸೂಕ್ತ ಪರಿಹಾರವನ್ನು ವೈದ್ಯರಿಂದ ತಿಳಿದುಕೊಳ್ಳಬಹುದು.

* ವಾಕರಿಕೆ

ಭೇದಿಯೊಂದಿಗೆ ವಾಕರಿಕೆಯೂ ಉಂಟಾಗುತ್ತದೆ. ಇವೆರಡು ಲಕ್ಷಣಗಳು ತಾತ್ಕಾಲಿಕವಾಗಿದ್ದರೂ ಆ್ಯಂಟಿಬಬಯಾಟಿಕ್‌ಗಳನ್ನು ಅತಿಯಾಗಿ ಸೇವಿಸಿದರೆ ಕಾಣಿಸಿಕೊಳ್ಳುತ್ತವೆ. ಆ್ಯಂಟಿಬಯಾಟಿಕ್‌ಗಳು ಬ್ಯಾಕ್ಟೀರಿಯಾ ಸಮತೋಲನಕ್ಕೆ ವ್ಯತ್ಯಯವನ್ನುಂಟು ಮಾಡಿದಾಗ ವಾಕರಿಕೆ ಮತ್ತು ಭೇದಿಯಂತಹ ಅಡ್ಡಪರಿಣಾಮಗಳು ವ್ಯಕ್ತಿಯಲ್ಲಿ ಉಂಟಾಗುತ್ತವೆ. ಕರುಳಿನಲ್ಲಿ ಬ್ಯಾಕ್ಟೀರಿಯಾಗಳ ಸಮತೋಲನವನ್ನು ಮರುಸ್ಥಾಪಿಸಲು ಪ್ರೊಬಯಾಟಿಕ್‌ಗಳು ಮತ್ತು ಪ್ರಿಬಯಾಟಿಕ್‌ಗಳ ಸೇವನೆಯನ್ನು ವೈದ್ಯರು ಸೂಚಿಸಬಹುದು.

* ಹೊಟ್ಟೆನೋವು

ಅನಗತ್ಯವಾಗಿ ಆ್ಯಂಟಿಬಯಾಟಿಕ್‌ಗಳ ಸೇವನೆಯು ಹಲವರಲ್ಲಿ ಹೊಟ್ಟೆನೋವನ್ನುಂಟು ಮಾಡುತ್ತದೆ ಮತ್ತು ಇದು ದೈನಂದಿನ ಚಟುವಟಿಕೆಗಳಿಗೆ ತೊಂದರೆಯನ್ನುಂಟು ಮಾಡಬಲ್ಲದು. ಆ್ಯಂಟಿ ಬಯಾಟಿಕ್‌ಗಳು ಕರುಳಿನಲ್ಲಿಯ ಬ್ಯಾಕ್ಟೀರಿಯಾಗಳೊಂದಿಗೆ ಸೇರುವುದು ಹೊಟ್ಟೆನೋವು ಮತ್ತು ವಾಯುವಿಗೆ ಕಾರಣವಾಗುತ್ತದೆ.

* ಉಬ್ಬರ

ಹೊಟ್ಟೆ ಉಬ್ಬರಿಸುವುದು ಬ್ಯಾಕ್ಟೀರಿಯಾ ಅಸಮತೋಲನದ ಅತ್ಯಂತ ಸಾಮಾನ್ಯ ಪರಿಣಾಮಗಳಲ್ಲೊಂದಾಗಿದೆ. ಆ್ಯಂಟಿ ಬಯಾಟಿಕ್‌ಗಳ ಸೇವನೆಯ ಬಳಿಕ ಪ್ರೊಬಯಾಟಿಕ್‌ಗಳನ್ನು ತೆಗೆದುಕೊಳ್ಳುವುದರಿಂದ ಈ ಅಡ್ಡಪರಿಣಾಮವನ್ನು ತಡೆಯಬಹುದಾಗಿದೆ. ಆದರೆ ಆ್ಯಂಟಿಬಯಾಟಿಕ್‌ಗಳ ಈ ಅಡ್ಡಪರಿಣಾಮದ ಬಗ್ಗೆ ನೀವು ನಿಮ್ಮ ವೈದ್ಯರ ಬಳಿ ಚರ್ಚಿಸಬೇಕಾಗುತ್ತದೆ. ಹೊಟ್ಟೆಯುಬ್ಬರದ ಜೊತೆಗೆ ಹಸಿವೂ ಸಹ ಕ್ಷೀಣಗೊಳ್ಳಬಹುದು. ಯಾವುದೇ ಕ್ಯಾಲೊರಿ ಸೇವಿಸದಿದ್ದರೂ ದೇಹದ ತೂಕ ಹೆಚ್ಚಾಗಿರುವಂತೆ ನಿಮಗೆ ಭಾಸವಾಗಬಹುದು.

* ಅಲರ್ಜಿ

ಯಾವುದೇ ಔಷಧಿಗಳು ಮತ್ತು ಆ್ಯಂಟಿಬಯಾಟಿಕ್‌ಗಳ ಬಳಿಕ ಅಲರ್ಜಿಯುಂಟಾಗುವ ಸಾಧ್ಯತೆಗಳಿರುತ್ತವೆ. ಕೆಲವು ಪ್ರತಿವರ್ತನೆಗಳು ಸೌಮ್ಯವಾಗಿದ್ದರೆ ಕೆಲವು ತೀವ್ರ ಸ್ವರೂಪದ್ದಾಗಿರುತ್ತವೆ ಮತ್ತು ತುರ್ತು ವೈದ್ಯಕೀಯ ನೆರವು ಅಗತ್ಯವಾಗುತ್ತದೆ. ನೀವು ನಿರ್ದಿಷ್ಟ ಆ್ಯಂಟಿಬಯಾಟಿಕ್‌ಗೆ ಅಲರ್ಜಿಯನ್ನು ಹೊಂದಿದ್ದರೆ ಅದನ್ನು ಸೇವಿಸಿದ ತಕ್ಷಣ ಅಲರ್ಜಿ ಲಕ್ಷಣಗಳು ಪ್ರಕಟಗೊಳ್ಳುತ್ತವೆ. ಉಸಿರಾಟಕ್ಕೆ ತೊಂದರೆ,ದದ್ದುಗಳು,ನಾಲಿಗೆ ಮತ್ತು ಗಂಟಲಿನಲ್ಲಿ ಊತ ಇವು ಇಂತಹ ಲಕ್ಷಣಗಳಲ್ಲಿ ಸೇರಿವೆ. ಇಂತಹ ಯಾವುದೇ ಅಲರ್ಜಿ ಪ್ರತಿವರ್ತನೆಯುಂಟಾದರೆ ತಕ್ಷಣ ವೈದ್ಯಕೀಯ ನೆರವನ್ನು ಪಡೆಯಬೇಕಾಗುತ್ತದೆ.

* ನವ್ಯಾ ಖರಬಂದಾ

* ಪೂರಕ ಮಾಹಿತಿ

ಡಾ.ಸೀಮಾ ಧೀರ್ ಕೃಪೆ:Onlymyhealth  

share
ವಾರ್ತಾಭಾರತಿ
ವಾರ್ತಾಭಾರತಿ
Next Story
X