ಅತ್ಯಾಚಾರ ಪ್ರಕರಣ: ಪತ್ರಕರ್ತನಿಗೆ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿದ ದಿಲ್ಲಿ ಹೈಕೋರ್ಟ್

ಹೊಸದಿಲ್ಲಿ: ದಿಲ್ಲಿ ಪೊಲೀಸರು ದಾಖಲಿಸಿರುವ ಅತ್ಯಾಚಾರ ಪ್ರಕರಣದಲ್ಲಿ ಮುಂಬೈ ಮೂಲದ ಪತ್ರಕರ್ತ ವರುಣ್ ಹಿರೇಮಥ್ ಅವರನ್ನು ಬಂಧಿಸದಂತೆ ದಿಲ್ಲಿ ಹೈಕೋರ್ಟ್ ಶುಕ್ರವಾರ ಮಧ್ಯಂತರ ರಕ್ಷಣೆ ಒದಗಿಸಿದೆ.
ನ್ಯಾಯಾಲಯದ ಏಕ ನ್ಯಾಯಾಧೀಶರ ಪೀಠವು ಪತ್ರಕರ್ತ ವರುಣ್ ಬಂಧನದಿಂದ ಮಧ್ಯಂತರ ರಕ್ಷಣೆ ನೀಡಿತು. ಈ ಮೊದಲು ಕೆಳ ನ್ಯಾಯಾಲಯವು ವರುಣ್ ಗೆ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿತ್ತು.
ಇಟಿ ನೌನಲ್ಲಿ ನಿರೂಪಕರಾಗಿದ್ದ ವರುಣ್ ವಿರುದ್ಧ ಚಾಣಕ್ಯಪುರಿ ಪೊಲೀಸ್ ಠಾಣೆಯಲ್ಲಿ ವಿವಿಧ ಐಪಿಸಿ ಸೆಕ್ಷನ್ ಗಳಡಿ ಎಫ್ ಐ ಆರ್ ದಾಖಲಾದ ಬಳಿಕ ಫೆಬ್ರವರಿ 23ರಂದು ತಲೆಮರೆಸಿಕೊಂಡಿದ್ದರು.
ಫೆಬ್ರವರಿ 20ರಂದು ಚಾಣಕ್ಯಪುರಿಯ ಪಂಚತಾರಾ ಹೊಟೇಲ್ ನಲ್ಲಿ ವರುಣ್ ಹಿರೇಮತ್ ನನ್ನ ಮೇಲೆ ಅತ್ಯಾಚಾರ ಎಸಗಿದ್ದ ಎಂದು ಮಹಿಳೆ ಮ್ಯಾಜಿಸ್ಟ್ರೇಟ್ ಮುಂದೆ ನೀಡಿರುವ ದೂರು ಹಾಗೂ ಹೇಳಿಕೆಯಲ್ಲಿ ತಿಳಿಸಿದ್ದಾರೆ.
Next Story