'ಎಬಿಪಿ' ಈಗ ಮಮತಾ ಬ್ಯಾನರ್ಜಿ ಜತೆಗಿದೆ, ಫಲಿತಾಂಶದ ನಂತರ ನಮ್ಮನ್ನು ಬೆಂಬಲಿಸಲಿದೆ ಎಂದ ಅಮಿತ್ ಶಾ !

ಕೊಲ್ಕತ್ತಾ : ''ಬಂಗಾಳಿ ಸುದ್ದಿ ವಾಹಿನಿ ಎಬಿಪಿ ಆನಂದ ಈಗ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯನ್ನು ಬೆಂಬಲಿಸುತ್ತಿದೆ ಆದರೆ ಒಮ್ಮೆ ಚುನಾವಣಾ ಫಲಿತಾಂಶ ಘೋಷಣೆಯಾದ ನಂತರ ಬಿಜೆಪಿಯನ್ನು ಬೆಂಬಲಿಸಲು ಆರಂಭಿಸಲಿದೆ'' ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಪಶ್ಚಿಮ ಬಂಗಾಳದ ಸಿಂಗೂರ್ ನಲ್ಲಿ ಬುಧವಾರ ನಡೆಸಿದ ಬೃಹತ್ ರೋಡ್ ಶೋ ವೇಳೆ ಅದೇ ಸುದ್ದಿ ಸಂಸ್ಥೆಯ ಪತ್ರಕರ್ತರೊಬ್ಬರ ಪ್ರಶ್ನೆಗೆ ಪ್ರತಿಕ್ರಿಯಿಸುತ್ತಾ ಹೇಳಿರುವುದು ಭಾರೀ ಸುದ್ದಿಯಾಗಿದೆ.
ತೃಣಮೂಲ ಕಾಂಗ್ರೆಸ್‍ನ ಮಾಜಿ ಸದಸ್ಯರಾಗಿದ್ದ ಹಾಗೂ ಹಾಲಿ ಸಿಂಗೂರ್ ಶಾಸಕರಾಗಿರುವ ಬಿಜೆಪಿ ಅಭ್ಯರ್ಥಿ ರಬೀಂದ್ರನಾಥ್ ಭಟ್ಟಾಚಾರ್ಯ ಅವರನ್ನು ಬೆಂಬಲಿಸಿ ಸೇರಿದ್ದ ಜನಸ್ತೋಮದ ಕುರಿತು ಪತ್ರಕರ್ತರೊಬ್ಬರು ಅಮಿತ್ ಶಾ ಅವರನ್ನು ಪ್ರಶ್ನಿಸಿದ್ದರು. ''ಈ ಹಿಂದೆ ಮಮತಾ ಬ್ಯಾನರ್ಜಿಯ ಜತೆಗಿದ್ದ ರಬೀಂದ್ರನಾಥ್ ಭಟ್ಟಾಚಾರ್ಯ ಅವರನ್ನು ಬೆಂಬಲಿಸಿ ಇಲ್ಲಿ ಸೇರಿರುವ ದೊಡ್ಡ ಸಂಖ್ಯೆಯ ಜನರ ಬಗ್ಗೆ ಏನನ್ನುತ್ತೀರಿ'' ಎಂದು ಎಬಿಪಿ ಆನಂದ ವಾಹಿನಿ ಪತ್ರಕರ್ತರೊಬ್ಬರು ಕೇಳಿದ್ದರು.
ಅದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ''ಈಗ ಎಬಿಪಿ ಕೂಡ ಆಕೆಯ (ಮಮತಾ ಬ್ಯಾನರ್ಜಿ) ಬಳಿ ಇದೆ, ಆದರೆ ಒಮ್ಮೆ ಚುನಾವಣೆ ಮುಗಿದ ನಂತರ ನೀವು ನಮ್ಮನ್ನು ಬೆಂಬಲಿಸುತ್ತೀರಿ'' ಎಂದು ಅವರು ಹೇಳಿದರು.
ಆದರೆ ಅಚ್ಚರಿಯೆಂದರೆ ಇತ್ತೀಚಿಗಿನ ದಿನಗಳಲ್ಲಿ ಎಬಿಪಿ ಆನಂದ ಈಗಿನ ಪಶ್ಚಿಮ ಬಂಗಾಳ ಸಿಎಂ ಪರ ಇರುವಂತೆ ಕಾಣುತ್ತಿಲ್ಲ ಎಂದು ಸ್ಕ್ರೋಲ್ ವರದಿಯೊಂದು ಹೇಳಿದೆ.
The home minister of India right now said, “ABP bhi abhi Mamta je ke sath hai, chunao ke baad humhare sath ajayegi.” (ABP is with Mamata now, after the elections they will come on our side) Where in the world you have a home minister openly and unabashedly saying such things? pic.twitter.com/2GHUi3tFDE
— Ronny Sen (@ronnysen) April 7, 2021