ಸಂಪೂರ್ಣ ಲಾಕ್ ಡೌನ್ ಗೆ ಮಹಾರಾಷ್ಟ್ರ ವಿಪತ್ತು ನಿರ್ವಹಣಾ ಸಚಿವರ ಪ್ರಸ್ತಾವ
ಶನಿವಾರ ಸರ್ವಪಕ್ಷ ಸಭೆಯಲ್ಲಿ ಸಿಎಂ ಉದ್ಧವ್ ಠಾಕ್ರೆ ಅಂತಿಮ ನಿರ್ಧಾರ

ಮುಂಬೈ: ಕೋವಿಡ್-19 ಪ್ರಕರಣಗಳ ನಿರಂತರ ಹೆಚ್ಚಳ ಹಾಗೂ ಮುಂಬರುವ ಹಬ್ಬಗಳ ದೃಷ್ಟಿಯಿಂದ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಗೆ ನಾನು ಪ್ರಸ್ತಾವ ಮಾಡಿದ್ದೇನೆ ಎಂದು ಮಹಾರಾಷ್ಟ್ರದ ವಿಪತ್ತು ನಿರ್ವಹಣಾ ಸಚಿವ ವಿಜಯ್ ವಾಡೆಟ್ಟಿವಾರ್ ತಿಳಿಸಿದ್ದಾರೆ.
ಕೋವಿಡ್-19 ಸರಪಳಿಯನ್ನು ತುಂಡರಿಸಲು ಎಲ್ಲ ಅಂಗಡಿ-ಮುಗ್ಗಟ್ಟುಗಳನ್ನು ಮುಚ್ಚುವುದು ನಿರ್ಣಾಯಕವಾಗಿದೆ. ವರ್ಚುವಲ್ ಸಭೆಯಲ್ಲಿ ರಾಜ್ಯದಲ್ಲಿ ಸಂಪೂರ್ಣ ಲಾಕ್ ಡೌನ್ ಮಾಡಲು ನಾನು ಪ್ರಸ್ತಾವ ಇಟ್ಟಿದ್ದೇನೆ. ಈವಿಚಾರದ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಶನಿವಾರ ನಡೆಯಲಿರುವ ಸರ್ವಪಕ್ಷ ಸಭೆಯಲ್ಲಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ ಎಂದು ಅವರು ವಿಜಯ್ ಹೇಳಿದ್ದಾರೆ.
ನಾವು ಪ್ರತಿದಿನ 50ರಿಂದ 60 ಸಾವಿರ ಕೇಸ್ ಗಳನ್ನು ನೋಡುತ್ತಿದ್ದೇವೆ. ಇಂದು ನಮ್ಮಲ್ಲಿ 5.31 ಲಕ್ಷ ಸಕ್ರಿಯ ಪ್ರಕರಣಗಳಿವೆ. ಇದೇ ರೀತಿ ಕೊರೋನ ಹೆಚ್ಚಳವಾಗುತ್ತಾ ಹೋದರೆ, ಶೀಘ್ರವೇ 10 ಲಕ್ಷ ಸಕ್ರಿಯ ಕೇಸ್ ಗಳನ್ನು ತಲುಪುತ್ತೇವೆ. ರಾಜ್ಯದಲ್ಲಿ ಇಂತಹ ಪರಿಸ್ಥಿತಿಯನ್ನು ತಪ್ಪಿಸಲು ಜನ ಜಂಗುಳಿಯನ್ನು ಕಡಿಮೆ ಮಾಡುವುದು ಅಗತ್ಯವಿದೆ ಎಂದರು.





