ಸಾರಿಗೆ ನೌಕರರ ಮುಷ್ಕರ ನಿಷೇಧಿಸಿ ರಾಜ್ಯ ಸರಕಾರ ಆದೇಶ

ಬೆಂಗಳೂರು, ಎ.9: ಕಳೆದ ಮೂರು ದಿನಗಳಿಂದ ಮುಷ್ಕರ ನಡೆಸುತ್ತಿರುವ ಸಾರಿಗೆ ನೌಕರರ ವಿರುದ್ಧ ರಾಜ್ಯ ಸರಕಾರ ಕಾನೂನು ಅಸ್ತ್ರ ಪ್ರಯೋಗಿಸಿದ್ದು, ನೌಕರರ ಮುಷ್ಕರವನ್ನೇ ನಿಷೇಧಿಸಿ ಆದೇಶ ಹೊರಡಿಸಿದೆ.
ಸಂಧಾನ ಪ್ರಕ್ರಿಯೆ ವೇಳೆ ಮುಷ್ಕರ ನಡೆಸುವಂತಿಲ್ಲ. ಕೈಗಾರಿಕಾ ವಿವಾದಗಳ ಕಾಯ್ದೆ-21(1)(ಡಿ) ಅನ್ವಯ ತಕ್ಷಣಕ್ಕೆ ಜಾರಿಗೆ ಬರುವಂತೆ ಸಾರಿಗೆ ನೌಕರರ ಮುಷ್ಕರವನ್ನು ನಿಷೇಧಿಸಿ ಆದೇಶಿಸಿದೆ.
ರಾಜ್ಯ ಸರಕಾರವು ಈ ಮುಷ್ಕರದ ನ್ಯಾಯ ನಿರ್ಣಯವನ್ನು ಆರು ತಿಂಗಳಲ್ಲಿ ಬಗೆಹರಿಸುವಂತೆ ಔಧ್ಯಮಿಕ ನ್ಯಾಯಾಧೀಕರಣಕ್ಕೆ ಮನವಿ ಮಾಡಿದೆ.
ಸಾರಿಗೆ ನೌಕರರು 6ನೆ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೊಳಿಸಬೇಕೆಂಬ ಬೇಡಿಕೆಯನ್ನು ಮಂಡಿಸಿರುವುದು ಹಾಗೂ ಮೂರು ದಿನದಿಂದ ಮುಷ್ಕರ ನಡೆಸುತ್ತಿರುವುದು ನ್ಯಾಯಸಮ್ಮತವೇ ಎಂದು ಸರಕಾರ ಪ್ರಶ್ನಿಸಿದೆ.
Next Story





