ಐಪಿಎಲ್: ಮುಂಬೈ ಇಂಡಿಯನ್ಸ್ 159/9
ಹರ್ಷಲ್ ಪಟೇಲ್ ಗೆ ಐದು ವಿಕೆಟ್ ಗೊಂಚಲು

ಚೆನ್ನೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮಧ್ಯಮ ವೇಗದ ಬೌಲರ್ ಹರ್ಷಲ್ ಪಟೇಲ್ (5-27)ಉತ್ತಮ ಬೌಲಿಂಗ್ ದಾಳಿಯ ಹೊರತಾಗಿಯೂ ಆರಂಭಿಕ ಆಟಗಾರ ಕ್ರಿಸ್ ಲಿನ್(49, 35 ಎಸೆತ, 4 ಬೌಂಡರಿ, 3 ಸಿಕ್ಸರ್),ಸೂರ್ಯಕುಮಾರ್ ಯಾದವ್(31, 23 ಎಸೆತ, 4 ಬೌಂ.1 ಸಿ.) ಹಾಗೂ ಇಶಾನ್ ಕಿಶನ್(28, 19 ಎಸೆತ, 2 ಬೌಂ.1 ಸಿ.) ಎರಡಂಕೆಯ ಸ್ಕೋರ್ ನೆರವಿನಿಂದ ಹಾಲಿ ಚಾಂಪಿಯನ್ ಮುಂಬೈ ಇಂಡಿಯನ್ಸ್ ತಂಡ 14ನೇ ಆವೃತ್ತಿಯ ಐಪಿಎಲ್ ನ ಮೊದಲ ಪಂದ್ಯದಲ್ಲಿ ನಿಗದಿತ 20 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 159 ರನ್ ಗಳಿಸಿದೆ.
ಇಲ್ಲಿನ ಎಂ.ಎ. ಚಿದಂಬರಂ ಸ್ಟೇಡಿಯಂನಲ್ಲಿ ಟಾಸ್ ಜಯಿಸಿದ ಆರ್ ಸಿಬಿ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಆರ್ ಸಿಬಿ ಪರ ಪಟೇಲ್ ಯಶಸ್ವಿ ಬೌಲರ್ ಎನಿಸಿಕೊಂಡರೆ, ಕೈಲ್ ಜಮೀಸನ್(1-27) ಹಾಗೂ ವಾಷಿಂಗ್ಟನ್ ಸುಂದರ್(1-7)ತಲಾ ಒಂದು ವಿಕೆಟ್ ಪಡೆದರು.
ನಾಯಕ ರೋಹಿತ್ ಶರ್ಮಾ(19) ಹಾಗೂ ರಾಹುಲ್ ಚಹಾರ್(0)ರನೌಟ್ ಆದರು.
Next Story





